ಕರ್ನಾಟಕ

karnataka

ETV Bharat / sports

ಬ್ರಿಸ್ಬೇನ್​ನಲ್ಲಿ ಮೂಲಭೂತ ಸೌಲಭ್ಯವಿಲ್ಲದ ಹೋಟೆಲ್​: ಸಮಸ್ಯೆ ಬಗೆಹರಿಸಲು ಬಿಸಿಸಿಐ ಮಧ್ಯಪ್ರವೇಶ

ಆಟಗಾರರು ಮತ್ತು ಸಿಬ್ಬಂದಿ ಸೇರಲು ಅವಕಾಶ ಸಿಕ್ಕಿದಿಯಾ ಎಂದು ಕೇಳಿದ್ದಕ್ಕೆ ಉತ್ತರಿಸಿರುವ ಬಿಸಿಸಿಐ(ಮೂಲ), ಹೌದು, ಒಂದು ಟೀಮ್ ರೂಮ್​ ನೀಡಿದ್ದು, ಅಲ್ಲಿ ಆಟಗಾರರೆಲ್ಲರೂ ಸೇರಲು ಅವಕಾಶ ನೀಡಿದ್ದಾರೆ. ಅಲ್ಲದೆ ಹೋಟೆಲ್​ನ ಒಳಗೆ ಒಬ್ಬರನ್ನೊಬ್ಬರು ಭೇಟಿಯಾಗಲು ಕೂಡ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.

ಬ್ರಿಸ್ಬೇನ್​ ಟೆಸ್ಟ್​
ಬ್ರಿಸ್ಬೇನ್​ ಟೆಸ್ಟ್​

By

Published : Jan 12, 2021, 6:42 PM IST

ನವದೆಹಲಿ:ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಬ್ರಿಸ್ಬೇನ್‌ಗೆ ಬಂದಿಳಿರುವ ಭಾರತ ಕ್ರಿಕೆಟ್ ತಂಡ ಅಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿರುವ ಹೋಟೆಲ್​ ನೋಡಿ ಆಘಾತಕ್ಕೊಳಗಾಗಿದ್ದು, ಬಿಸಿಸಿಐ ಉನ್ನತ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ಕಾರ್ಯದರ್ಶಿ ಜಯ್​ ಶಾ, ಸಿಇಒ ಹೇಮಂಗ್ ಅಮಿನ್​ ಕ್ರಿಕೆಟ್​ ಆಸ್ಟ್ರೆಲಿಯಾದ ಅಧಿಕಾರಿಗಳೊಡನೆ ಮಾತನಾಡಿದ್ದಾರೆ. ಈ ಮಾತುಕತೆಯ ನಂತರ ಭಾರತೀಯ ಕ್ರಿಕೆಟಿಗರು ಆರಾಮದಾಯಕವಾಗಿರುವಂತೆ ನೋಡಿಕೊಳ್ಳುವುದಾಗಿ ಸಿಎ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.

"ಹೋಟೆಲ್​ನಲ್ಲಿ ರೂಮ್​ ಸರ್ವೀಸ್​ ಅಥವಾ ಹೌಸ್​ ಕೀಪಿಂಗ್ ಸೌಲಭ್ಯವಿಲ್ಲ. ಜಿಮ್​ ಅತ್ಯಂತ ಸಾಧಾರಣವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಅದು ಸರಿಹೊಂದುವುದಿಲ್ಲ. ಸ್ವಿಮ್ಮಿಂಗ್ ಪೂಲ್​ ಸೌಲಭ್ಯವಿಲ್ಲ. ಕ್ರಿಕೆಟ್​ ಆಸ್ಟ್ರೇಲಿಯಾ ಈ ಮೊದಲು ಅಲ್ಲಿಗೆ ತೆರಳುವ ಮುನ್ನ ನೀಡಿದ್ದ ಭರವಸೆಯಂತೆ ಸೌಲಭ್ಯಗಳನ್ನು ಒದಗಿಸಿಲ್ಲ" ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.

ಆಟಗಾರರು ಮತ್ತು ಸಿಬ್ಬಂದಿ ಸೇರಲು ಅವಕಾಶ ಸಿಕ್ಕಿದಿಯಾ ಎಂದು ಕೇಳಿದ್ದಕ್ಕೆ ಉತ್ತರಿಸಿರುವ ಬಿಸಿಸಿಐ(ಮೂಲ), ಹೌದು, ಒಂದು ಟೀಮ್ ರೂಮ್​ ನೀಡಿದ್ದು, ಅಲ್ಲಿ ಆಟಗಾರರೆಲ್ಲರೂ ಸೇರಲು ಅವಕಾಶ ನೀಡಿದ್ದಾರೆ. ಅಲ್ಲದೆ ಹೋಟೆಲ್​ನ ಒಳಗೆ ಒಬ್ಬರನ್ನೊಬ್ಬರು ಭೇಟಿಯಾಗಲು ಕೂಡ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.

ಬಾರ್ಡರ್​ ಗವಾಸ್ಕರ್​ ಟೂರ್ನಿಯ 3 ಪಂದ್ಯಗಳು ಮುಗಿದಿದ್ದು, ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದು 1-1ರಲ್ಲಿ ಸರಣಿ ಸಮಬಲ ಸಾಧಿಸಿವೆ. ಕೊನೆಯ ಪಂದ್ಯ ಬ್ರಿಸ್ಬೇನ್​ನ ಗಬ್ಬಾದಲ್ಲಿ ನಡೆಯಲಿದ್ದು, ಈ ಪಂದ್ಯ ಎರಡೂ ತಂಡಕ್ಕೂ ಸರಣಿ ಗೆಲ್ಲಲು ನಿರ್ಣಾಯಕವಾಗಿದೆ. ಪ್ರಸ್ತುತ ಟ್ರೋಫಿ ಭಾರತದ ವಶದಲ್ಲಿದೆ.

ಇದನ್ನು ಓದಿ:ಜನಾಂಗೀಯ ನಿಂದನೆ ಪ್ರಕರಣ.. ಟೀಂ​ ಇಂಡಿಯಾ ಮತ್ತು ಸಿರಾಜ್​ ಕ್ಷಮೆ ಕೇಳಿದ ವಾರ್ನರ್..

ABOUT THE AUTHOR

...view details