ಕರ್ನಾಟಕ

karnataka

ETV Bharat / sports

ಟಿ-20 ವಿಶ್ವಕಪ್​ ಮುಂದೂಡಿಕೆಯ ನಿರೀಕ್ಷೆಯಲ್ಲಿ ಬಿಸಿಸಿಐ; ನಾಳೆ ಐಸಿಸಿ ತೀರ್ಮಾನ - ಸೋಮವಾರ ಐಸಿಸಿ ಸಭೆ

ಈ ವಿಶ್ವಮಟ್ಟದ ಟೂರ್ನಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್​ 18 ರಿಂದ ನವೆಂಬರ್​ 15ರವರೆಗೆ ನಡೆಯಬೇಕಿದೆ. ಆದರೆ ವಿಕ್ಟೋರಿಯಾದಲ್ಲಿ ಕೋವಿಡ್​-19 ಎರಡನೇ ಹಂತದಲ್ಲಿರುವುದರಿಂದ ತಮ್ಮಿಂದ ದೊಡ್ಡ ಮಟ್ಟದ ಟೂರ್ನಿಯನ್ನು ಆಯೋಜನೆ ಮಾಡಲಾಗುವುದಿಲ್ಲ ಎಂದು ಆಸ್ಟ್ರೇಲಿಯಾ ಹೇಳಿಕೊಂಡಿದೆ.

ಟಿ20 ವಿಶ್ವಕಪ್​
ಐಸಿಸಿ ಸಭೆ

By

Published : Jul 19, 2020, 5:50 PM IST

ದುಬೈ:ಕಳೆದ ಎರಡು ತಿಂಗಳಿಂದ ತೂಗುಯ್ಯಾಲೆಯಲ್ಲಿರುವ ಟಿ-20 ವಿಶ್ವಕಪ್​ ಬಗ್ಗೆ ಸೋಮವಾರ ನಡೆಯುವ ಸಭೆಯಲ್ಲಿ ಐಸಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿಯನ್ನು​ ಮುಂದೂಡುವ ನಿರ್ಧಾರ ಕೈಗೊಳ್ಳಲಿದೆ ಎಂದು ಬಿಸಿಸಿಐ ನಿರೀಕ್ಷೆ ಮಾಡಿದೆ.

ಈ ವಿಶ್ವಮಟ್ಟದ ಟೂರ್ನಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್​ 18ರಿಂದ ನವೆಂಬರ್​ 15ರವರೆಗೆ ನಡೆಯಬೇಕಿದೆ. ಆದರೆ ವಿಕ್ಟೋರಿಯಾದಲ್ಲಿ ಕೋವಿಡ್​-19 ಎರಡನೇ ಹಂತದಲ್ಲಿರುವುದರಿಂದ ತಮ್ಮಿಂದ ದೊಡ್ಡ ಟೂರ್ನಿಯನ್ನು ಆಯೋಜನೆ ಮಾಡಲಾಗುವುದಿಲ್ಲ ಎಂದು ಹೇಳಿಕೊಂಡಿದೆ.

ಇನ್ನು ಭಾರತದಲ್ಲೂ ಕೊರೊನಾ ವೈರಸ್ ಪ್ರಕರಣ 10 ಲಕ್ಷದ ಗಡಿದಾಟಿದೆ. ಆದ್ದರಿಂದ ಶ್ರೀಮಂತ ಕ್ರಿಕೆಟ್​ ಲೀಗ್ ಯುಎಇಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ.

ಈಗಾಗಲೆ ಏಷ್ಯಾಕಪ್​ ಮುಂದೂಡಲಾಗಿದೆ. ಇನ್ನು ಟಿ-20 ವಿಶ್ವಕಪ್​ ಮುಂದೂಡುವ ಬಗ್ಗೆ ಐಸಿಸಿ ಅಂತಿಮ ನಿರ್ಧಾರ ತೆಗೆದುಕೊಂಡ ಮೇಲೆ ನಾವು ನಮ್ಮ ಯೋಜನೆಯಂತೆ ನಡೆಯಲು ಸಾಧ್ಯವಾಗಲಿದೆ. ಮೆಗಾ ಇವೆಂಟ್​ ಆಯೋಜಿಸಲು ತಾನು ಆಸಕ್ತಿ ಹೊಂದಿಲ್ಲ ಎಂದು ಆಸ್ಟ್ರೇಲಿಯಾ ಹೇಳಿದ ನಂತರವೂ ಐಸಿಸಿ ಇನ್ನೂ ತನ್ನ ನಿರ್ಧಾರ ಪ್ರಕಟಿಸಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಮುಂದಿನ ವಿಶ್ವಕಪ್ ಪಂದ್ಯಾವಳಿ​ ಆಸ್ಟ್ರೇಲಿಯಾದಲ್ಲಿ 2022ಕ್ಕೆ ನಡೆಯುವ ಸಾಧ್ಯತೆಯಿದೆ.

ABOUT THE AUTHOR

...view details