ಕರ್ನಾಟಕ

karnataka

ETV Bharat / sports

ರಾಹುಲ್​ vs ಪಂತ್​: ವಿಶ್ವಕಪ್​ಗೆ ವಿಕೆಟ್​ ಕೀಪರ್​ ಯಾರಾಗ್ತಾರೆ?:  ದಾದಾ ಕೊಟ್ರು ಈ ಉತ್ತರ!

ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಏಕದಿನ ಸರಣಿಯ ಮೊದಲ ಪಂದ್ಯದ ವೇಳೆ  ರಿಷಭ್​ ಪಂತ್ ಗಾಯಗೊಂಡಿದ್ದರು. ಈ ವೇಳೆ ವಿಕೆಟ್​ ಕೀಪಿಂಗ್​ ಜವಾಬ್ದಾರಿ ಹೊತ್ತ ಕೆ.ಎಲ್​ ರಾಹುಲ್​ ಬ್ಯಾಟಿಂಗ್​ ಹಾಗೂ ಕೀಪಿಂಗ್​ ಎರಡನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಈ ಕಾರಣದಿಂದ ಪಂತ್​ ಅವರನ್ನು ಕಿವೀಸ್​ ಸರಣಿಯಿಂದ ಹೊರಗಿಟ್ಟ ಕೊಹ್ಲಿ ರಾಹುಲ್​ರನ್ನೇ ವಿಕೆಟ್​ ಕೀಪರ್​ ಆಗಿ ಆಡಿಸುತ್ತಿದ್ದಾರೆ.

ರಾಹುಲ್​- ರಿಷಭ್​ ಪಂತ್
ರಾಹುಲ್​- ರಿಷಭ್​ ಪಂತ್

By

Published : Jan 25, 2020, 8:11 PM IST

Updated : Jan 25, 2020, 9:22 PM IST

ಮುಂಬೈ:ಧೋನಿ ಅನುಪಸ್ಥಿತಿಯಲ್ಲಿ ಭಾರತ ತಂಡದ ವಿಕೆಟ್ ಕೀಪಿಂಗ್​ ​ಜವಾಬ್ದಾರಿ ಹೊತ್ತಿದ್ದ ಯುವ ವಿಕೆಟ್​ ಕೀಪರ್​ ರಿಷಭ್​ ಪಂತ್​ ತಮ್ಮ ಮೇಲಿನ ಭರವಸೆಯನ್ನು ಹುಸಿಯಾಗಿಸಿದ್ದಾರೆ. ಆ ಜಾಗವವನ್ನು ಕನ್ನಡಿಗ ಕೆ.ಎಲ್​ ರಾಹುಲ್​ ತುಂಬುತ್ತಿದ್ದು, ಅವರೇ ಮುಂದಿನ ದಿನಗಳಲ್ಲಿ ಸೀಮಿತ ಓವರ್​ಗಳ ಕೀಪರ್​ ಆಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿರುವಾಗಲೇ ಬಿಸಿಸಿಐ ಅಧ್ಯಕ್ಷ ಗಂಗೂಲಿ ಕೂಡ ರಾಹುಲ್​ ಪರ ಬ್ಯಾಟ್​ ಬೀಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಏಕದಿನ ಸರಣಿಯ ಮೊದಲ ಪಂದ್ಯದ ವೇಳೆ ರಿಷಭ್​ ಪಂತ್ ಗಾಯಗೊಂಡಿದ್ದರು. ಈ ವೇಳೆ ವಿಕೆಟ್​ ಕೀಪಿಂಗ್​ ಜವಾಬ್ದಾರಿ ಹೊತ್ತ ಕೆ.ಎಲ್​ ರಾಹುಲ್​ ಬ್ಯಾಟಿಂಗ್​ ಹಾಗೂ ಕೀಪಿಂಗ್​ ಎರಡನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಈ ಕಾರಣದಿಂದ ಪಂತ್​ ಅವರನ್ನು ಕಿವೀಸ್​ ಸರಣಿಯಿಂದ ಹೊರಗಿಟ್ಟ ಕೊಹ್ಲಿ ರಾಹುಲ್​ರನ್ನೇ ವಿಕೆಟ್​ ಕೀಪರ್​ ಆಗಿ ಆಡಿಸುತ್ತಿದ್ದಾರೆ.

ಪಂತ್​ರನ್ನು ತಂಡದಿಂದ ಕೈಬಿಟ್ಟು ರಾಹುಲ್​ಗೆ ವಿಕೆಟ್​ ಕೀಪಿಂಗ್​ ಜವಾವ್ದಾರಿ ನೀಡಿದ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಗಂಗೂಲಿ" ಅವರು(ರಾಹುಲ್​) ಏಕದಿನ ಮತ್ತು ಟಿ-20ಯಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆರಂಭಿಸಿದರೂ ನಂತರ ತುಸು ವೈಫಲ್ಯ ಕಂಡಿದ್ದರು. ಆದರೆ, ಸೀಮಿತ ಓವರ್‌ ಕ್ರಿಕೆಟ್​ನಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದಾರೆ ಮತ್ತು ಅವರು ಅದೇ ಆಟವನ್ನು ಮುಂದುವರಿಸಲಿದ್ದಾರೆ ಎಂಬ ವಿಶ್ವಾಸವಿದೆ. ಪಂತ್​ ಅಥವಾ ರಾಹುಲ್​ ನಡುವಿನ ಆಯ್ಕೆಯ ಬಗೆಗಿನ ನಿರ್ಧಾರವನ್ನು ಆಡಳಿತ ಮಂಡಳಿ ತೆಗೆದುಕೊಳ್ಳಲಿದೆ" ಎಂದಿದ್ದಾರೆ.

ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್​ ನಡೆಯಲಿದ್ದು, ವಿಕೆಟ್​ ಕೀಪರ್​ ಸ್ಥಾನಕ್ಕಾಗಿ ರಿಷಭ್​ ಪಂತ್​, ಧೋನಿ, ಸಂಜು ಸಾಮ್ಸನ್​ ಹಾಗೂ ಕೆ.ಎಲ್​ ರಾಹುಲ್​ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ. ಇದರಲ್ಲಿ ಧೋನಿಗೆ ಅವಕಾಶ ಕಡಿಮೆಯಿದ್ದರೂ ಉಳಿದ ಮೂವರ ನಡುವೆ ಪ್ರಬಲ ಸ್ಪರ್ಧೆ ನಡೆಯಲಿದೆ.

Last Updated : Jan 25, 2020, 9:22 PM IST

ABOUT THE AUTHOR

...view details