ಕರ್ನಾಟಕ

karnataka

ETV Bharat / sports

ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆ: ಟಿ-20 ವಿಶ್ವಕಪ್​ಗೆ ಈಗಿನಿಂದಲೇ ತಾಲೀಮು - ದೇಶಿ ಕ್ರಿಕೆಟ್ ಟೂರ್ನಮೆಂಟ್

ಟಿ-20 ವಿಶ್ವಕಪ್‌ಗೆ ತಯಾರಿ ನಡೆಸುವ ಭಾರತದ ಯೋಜನೆಯ ಭಾಗವಾಗಿ ನ್ಯೂಜಿಲ್ಯಾಂಡ್ ತಂಡಕ್ಕೆ ಆತಿಥ್ಯ ವಹಿಸಲು ಬಿಸಿಸಿಐ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

BCCI Apex Council meeting:
ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆ

By

Published : Jan 18, 2021, 7:08 AM IST

ನವದೆಹಲಿ: ಭಾನುವಾರ ಅಪೆಕ್ಸ್ ಕೌನ್ಸಿಲ್ ಸಭೆಯನ್ನು ನಡೆಸಿದ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಜ್ಯ ಘಟಕಗಳೊಂದಿಗೆ ಹೆಚ್ಚಿನ ಚರ್ಚೆಯ ನಂತರ ದೇಶೀಯ ಸೀಸನ್ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದೆ.

2021ರ ಟಿ-20 ವಿಶ್ವಕಪ್ ಸಿದ್ಧತೆಗಾಗಿ ನ್ಯೂಜಿಲ್ಯಾಂಡ್​ ಭಾರತ ಪ್ರವಾಸ ಮಾಡಲಿದೆ. ರಣಜಿ ಟ್ರೋಫಿ ಅಥವಾ ವಿಜಯ್ ಹಜಾರೆ ಟ್ರೋಫಿಯ ಆಯೋಜನೆ ಕುರಿತು ಕುರಿತು ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸಭೆಯಲ್ಲಿ ಹಾಜರಿದ್ದ ಮೂಲಗಳು ತಿಳಿಸಿವೆ.

ಟಿ-20 ವಿಶ್ವಕಪ್ ಟೂರ್ನಿ ಮೇಲೆ ಕಣ್ಣಿಟ್ಟು, ನ್ಯೂಜಿಲ್ಯಾಂಡ್ ಭಾರತ ಪ್ರವಾಸ ಮಾಡಲಿದೆ. "ನಾವು ಇನ್ನೂ ದೇಶೀಯ ಸೀಸನ್ ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಮತ್ತು ರಣಜಿ ಟ್ರೋಫಿ ಅಥವಾ 50 ಓವರ್ ಸ್ವರೂಪದ ಕ್ರಿಕೆಟ್ ಟೂರ್ನಿ ಪಾರಂಭಿಸುವ ಬಗ್ಗೆ ನೋಡಬೇಕಾಗಿದೆ. ವಿಜಯ್ ಹಜಾರೆ ಟೂರ್ನಿ ಆಯೋಜನೆಗೆ ರಾಜ್ಯ ಕ್ರಿಕೆಟ್ ಅಸೋಸಿಯೇಷನ್​ಗಳು ಬಹಳ ಆಸಕ್ತಿ ತೋರಿವೆ, ಆದ್ದರಿಂದ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಳಸುತ್ತಿರುವಂತೆಯೇ ಬಬಲ್ ವ್ಯವಸ್ಥೆಯು ಮುಂದುವರೆಯಲಿವೆ "ಎಂದು ಮೂಲಗಳು ತಿಳಿಸಿವೆ.

ನ್ಯೂಜಿಲ್ಯಾಂಡ್​‌ಗೆ ಆತಿಥ್ಯ ವಹಿಸುವ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಮೂಲಗಳು. ಇದು ಟಿ-20 ವಿಶ್ವಕಪ್‌ಗೆ ತಯಾರಿ ನಡೆಸುವ ಭಾರತದ ಯೋಜನೆಯ ಭಾಗವಾಗಿತ್ತು. "ಪಂದ್ಯ ನಡೆಯುವ ಸ್ಥಳಗಳು ಮತ್ತು ವಿವರಗಳನ್ನು ಕೆಲ ಸಮಯದಲ್ಲಿ ಅಂತಿಮಗೊಳಿಸಲಾಗುವುದು. ಆದರೆ ಟಿ-20 ವಿಶ್ವಕಪ್ ಮೇಲೆ ಕಣ್ಣಿಟ್ಟು ಗರಿಷ್ಠ ಚುಟುಕು ಪಂದ್ಯಗಳನ್ನು ಆಡುವ ಉದ್ದೇಶವಿದೆ. ಇದು ಆಟಗಾರರನ್ನು ರೆಡಿ ಮಾಡಲು ಸಹಾಯ ಮಾಡುತ್ತದೆ" ಎಂದು ಮೂಲವು ತಿಳಿಸಿದೆ.

ABOUT THE AUTHOR

...view details