ಕರ್ನಾಟಕ

karnataka

ETV Bharat / sports

IPL​ ಅಧಿಕೃತ ಪಾಲುದಾರಿಕೆ ಪಡೆದ ಬೆಂಗಳೂರು ಮೂಲದ ಅನ್​ಅಕಾಡೆಮಿ ಸಂಸ್ಥೆ - ಐಪಿಎಲ್​ 2020

13ನೇ ಆವೃತ್ತಿಯ ಐಪಿಎಲ್‌ ಟೈಟಲ್​ ಪ್ರಾಯೋಜಕತ್ವಕ್ಕಾಗಿ ಪೈಪೋಟಿ ನಡೆಸಿ ವಿಫಲವಾಗಿದ್ದ ಅನ್​ಅಕಾಡೆಮಿ ಇದೀಗ ಅಧಿಕೃತ ಪಾಲುದಾರಿಕೆ ಪಡೆಯುವಲ್ಲಿ ಯಶಸ್ವಿವಾಗಿದೆ.

ಐಪಿಎಲ್​ನ​ ಅಧಿಕೃತ ಪಾಲುದಾರಿಕೆ
ಐಪಿಎಲ್​ನ​ ಅಧಿಕೃತ ಪಾಲುದಾರಿಕೆ

By

Published : Aug 29, 2020, 7:00 PM IST

ಮುಂಬೈ: ಬೆಂಗಳೂರು ಮೂಲದ ಆನ್​ಲೈನ್​ ಶಿಕ್ಷಣ ಸಂಸ್ಥೆಯಾದ ಅನ್ಅಕಾಡೆಮಿ 2020ರಿಂದ 2022ರವರೆಗೆ ಐಪಿಎಲ್​ನ ಅಧಿಕೃತ ಪಾಲುದಾರಿಕೆಯ ಒಪ್ಪಂದಕ್ಕೆ ಸಹಿ ಮಾಡಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

13ನೇ ಆವೃತ್ತಿಯ ಟೈಟಲ್​ ಪ್ರಾಯೋಜಕತ್ವಕ್ಕಾಗಿ ಪೈಪೋಟಿ ನಡೆಸಿ ವಿಫಲವಾಗಿದ್ದ ಈ ಸಂಸ್ಥೆ ಇದೀಗ ಅಧಿಕೃತ ಪಾಲುದಾರಿಕೆ ಪಡೆದಿದೆ.

"2020 ರಿಂದ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳ ಅಧಿಕೃತ ಪಾಲುದಾರರಾಗಿ ಅನಾಕಾಡೆಮಿ ಜೊತೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ನಾವು ಹರ್ಷವೆನಿಸುತ್ತಿದೆ" ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details