ಕರ್ನಾಟಕ

karnataka

ETV Bharat / sports

ಮಹಿಳೆಯರ ಟಿ-20 ಚಾಲೆಂಜ್​​​​​: ಈ ಬಾರಿ ನಾಲ್ಕು ತಂಡಗಳಿಂದ ಪೈಪೋಟಿ - ಜೈಪುರದ ಸವಾಯ್​ ಮಾನ್​ಸಿಂಗ್​ ಸ್ಟೇಡಿಯಂ

2020ರ ಮಹಿಳೆಯರ ಟಿ-20 ಚಾಂಲೆಂಜ್​ ಟೂರ್ನಿಗೆ ಈ ಬಾರಿ ಮೂರು ತಂಡಗಳ ಬದಲಾಗಿ ನಾಲ್ಕು ತಂಡಗಳು ಭಾಗವಹಿಸಲಿವೆ ಎಂದು ಬಿಸಿಸಿಐ ಘೋಷಣೆ ಮಾಡಿದೆ.

Women's T20 Challenge
ಮಹಿಳೆಯರ ಟಿ20 ಚಾಲೆಂಜ್

By

Published : Feb 29, 2020, 4:05 PM IST

ಮುಂಬೈ: ಐಪಿಎಲ್​ ಪ್ಲೇ ಆಫ್​​​ ವೇಳೆ ನಡೆಯುವ ಮಹಿಳೆಯರ ಟಿ-20 ಚಾಲೆಂಜರ್ಸ್​ನಲ್ಲಿ ಈ ಬಾರಿ ನಾಲ್ಕು ತಂಡಗಳು ಪೈಪೋಟಿ ನಡೆಸಲಿವೆ ಎಂದು ಬಿಸಿಸಿಐ ಖಚಿತಪಡಿಸಿದೆ.

2018ರಿಂದ ಐಪಿಎಲ್​ ಪ್ಲೇ ಆಫ್​ ಸಂದರ್ಭದ ಬಿಡುವಿನ ವೇಳೆಯಲ್ಲಿ ಮಹಿಳೆಯರ ಐಪಿಎಲ್​ ಪಂದ್ಯಗಳನ್ನು ನಡೆಸಲಾಗುತ್ತಿದೆ. ಮೊದಲ ಬಾರಿ ಏಕೈಕ ಪಂದ್ಯ ನಡೆಸಲಾಗಿತ್ತು. ಆ ವೇಳೆ ಐಪಿಎಲ್​ ಸೂಪರ್​ನೊವಾಸ್​ ಹಾಗೂ ಐಪಿಎಲ್​ ಟ್ರೈಬ್ಲೇಜರ್ಸ್ ತಂಡಗಳ ನಡುವೆ ಏಕೈಕ ಪಂದ್ಯ ನಡೆದಿತ್ತು. ನಂತರ 2019ರಲ್ಲಿ ಐಪಿಎಲ್​​ ವೆಲಾಸಿಟಿ ತಂಡ ಸೇರ್ಪಡೆಗೊಂಡಿತ್ತು. ಈ ಎರಡು ಆವೃತ್ತಿಯಲ್ಲೂ ಹರ್ಮನ್​ಪ್ರೀತ್​ ಕೌರ್​ ನೇತೃತ್ವದ ಐಪಿಎಲ್​ ಸೂಪರ್​ನೊವಾಸ್ ಪ್ರಶಸ್ತಿ ಗೆದ್ದುಕೊಂಡಿತ್ತು.

ಹಾಲಿ ಚಾಂಪಿಯನ್​ ಸೂಪರ್​ನೊವಾಸ್​

ಇದೀಗ 2020ಕ್ಕೆ ಮತ್ತೊಂದು ತಂಡ ಸೇರ್ಪಡೆಯಾಗಲಿದೆ ಎಂದು ಬಿಸಿಸಿಐ ಖಚಿತಪಡಿಸಿದೆ. ಈ ಆವೃತ್ತಿಯಲ್ಲಿ 7 ಪಂದ್ಯಗಳು ನಡೆಯಲಿವೆ. ಇಂಗ್ಲೆಂಡ್​, ವೆಸ್ಟ್ ಇಂಡೀಸ್​, ಬಾಂಗ್ಲಾದೇಶ, ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾ ತಂಡದ ಆಟಗಾರ್ತಿಯರು ಈ ಟೂರ್ನಿಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಪಂದ್ಯಗಳು ಜೈಪುರದ ಸವಾಯ್​ ಮಾನ್​ಸಿಂಗ್​ ಸ್ಟೇಡಿಯಂನಲ್ಲಿ ನಡೆಯಲಿವೆ.

ಟಿ-20 ಚಾಲೆಂಜ್​ ಚಾಂಪಿಯನ್ಸ್​

2020ರ ಐಪಿಎಲ್​ ಮಾರ್ಚ್​ 29ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಹಾಗೂ ರನ್ನರ್​ ಅಪ್ ಚೆನ್ನೈ ಸೂಪರ್​ ಕಿಂಗ್ಸ್​ ಸೆಣಸಾಡಲಿವೆ.

ABOUT THE AUTHOR

...view details