ಮುಂಬೈ:ಜನವರಿ 20 ರಂದು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ 5 ಪಂದ್ಯಗಳ ಟಿ-20 ಸರಣಿಯನ್ನು ಆಡಲಿದ್ದು, ಬಿಸಿಸಿಐ ಟಿ-20 ತಂಡವನ್ನು ಪ್ರಕಟಿಸಿದೆ.
ಬಹುತೇಕ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡಿದ್ದ ಆಟಗಾರರಿಗೆ ಬಿಸಿಸಿಐ ಮಣೆ ಹಾಕಿದ್ದು, ಆರಂಭಿಕ ಆಟಗಾರ ರೋಹಿತ್ ಶರ್ಮಾ ಮತ್ತು ವೇಗಿ ಮೊಹಮ್ಮದ್ ಶಮ್ಮಿ ತಂಡಕ್ಕೆ ವಾಪಸ್ ಆಗಿದ್ದಾರೆ.
ವಿಪರ್ಯಾಸ ಎಂದರೆ, ಕಳೆದ ಹಲವು ಟೂರ್ನಿಗಳಿಗೆ ಆಯ್ಕೆಯಾಗಿ ಬೆಂಚ್ ಕಾದಿದ್ದ ಯುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ರನ್ನು ತಂಡದಿಂದ ಕೈಬಿಡಲಾಗಿದೆ. ಶ್ರೀಲಂಕಾ ವಿರುದ್ಧದ ಅಂತಿಮ ಟಿ-20 ಪಂದ್ಯದಲ್ಲಿ ಮಾತ್ರ ಸ್ಯಾಮ್ಸನ್ಗೆ ಆಡುವ ಅವಕಾಶ ನೀಡಲಾಗಿತ್ತು.