ಕರ್ನಾಟಕ

karnataka

ETV Bharat / sports

ಮಹಿಳಾ ಟಿ20 ಚಾಲೆಂಜ್​ ಟೂರ್ನಮೆಂಟ್​ನ ಟೈಟಲ್ ಪ್ರಾಯೋಜಕತ್ವ ಪಡೆದ ಜಿಯೋ - Board of Control for Cricket in India

ಮಹಿಳಾ ಟೂರ್ನಮೆಂಟ್​ಗಳಿಗೆ ಇದೇ ಮೊದಲ ಬಾರಿಗೆ ಪ್ರಾಯೋಜಕರು ಪ್ರತ್ಯೇಕವಾಗಿ ಒಪ್ಪಂದಕ್ಕೆ ಸಹಿಯಾಕಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಿಳಾ ಟಿ20 ಚಾಲೆಂಜ್​
ಮಹಿಳಾ ಟಿ20 ಚಾಲೆಂಜ್​

By

Published : Nov 1, 2020, 11:48 PM IST

ಮುಂಬೈ: 2020ರ ಮಹಿಳಾ ಟಿ-20 ಚಾಲೆಂಜ್ ಟೂರ್ನಮೆಂಟ್​ನ ಟೈಟಲ್ ಪ್ರಾಯೋಜಕತ್ವವನ್ನು ಜಿಯೋ ಸಂಸ್ಥೆ ಪಡೆದುಕೊಂಡಿದೆ ಎಂದು ಬಿಸಿಸಿಐ ಭಾನುವಾರ ತಿಳಿಸಿದೆ.

ಪುರುಷರ ಲೀಗ್​ ಹಂತದ ಪಂದ್ಯಗಳು ನಡೆದ ನಂತರ 4 ಪಂದ್ಯಗಳ ಮಹಿಳಾ ಟಿ 20 ಚಾಲೆಂಜ್ ಟೂರ್ನಮೆಂಟ್​ ಶಾರ್ಜಾ ಮೈದಾನದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಮೂರು ತಂಡಗಳು ಭಾಗವಹಿಸಲಿವೆ. ಸೂಪರ್​ನೋವಾಸ್ ಮತ್ತು ವೆಲಾಸಿಟಿ ಮತ್ತು ಟ್ರೈಲ್‌ಬ್ಲೇಜರ್‌ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಈ ತಂಡಗಳನ್ನು ಕ್ರಮವಾಗಿ ಹರ್ಮನ್ ಪ್ರೀತ್ ಕೌರ್​, ಮಿಥಾಲಿ ರಾಜ್​ ಹಾಗೂ ಸ್ಮೃತಿ ಮಂಧಾನ ಮುನ್ನಡೆಸಲಿದ್ದಾರೆ.

" ಮಹಿಳಾ ಟಿ20 ಚಾಲೆಂಜ್​ನ 2020ರ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಜಿಯೋ ಪಡೆದಿದೆ. ಜಿಯೋಗೆ ರಿಲಯನ್ಸ್​ ಪೌಂಡೇಷನ್​ ಎಜುಕೇಶನ್ ಮತ್ತು ಸ್ಪೋರ್ಟ್ಸ್ ಫಾರ್​ ಆಲ್​ನ​ ಬೆಂಬಲವಿದೆ " ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.

ಜೊತೆಗೆ ಮಹಿಳಾ ಟೂರ್ನಮೆಂಟ್​ಗಳಿಗೆ ಇದೇ ಮೊದಲ ಬಾರಿಗೆ ಪ್ರಾಯೋಜಕರು ಪ್ರತ್ಯೇಕವಾಗಿ ಬಿಸಿಸಿಐ ಜೊತೆ ಒಪ್ಪಂದಕ್ಕೆ ಸಹಿಯಾಕಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನವೆಂಬರ್ 4, 5, 7 ರಂದು ಲೀಗ್ ಪಂದ್ಯಗಳು ಮತ್ತು ನವೆಂಬರ್​ 9 ರಂದು ಫೈನಲ್ ಪಂದ್ಯ ನಡೆಯಲಿದೆ.

ABOUT THE AUTHOR

...view details