ಮುಂಬೈ: ಮುಂಬರುವ ಆಸ್ಟ್ರೇಲಿಯಾ ವಿರುದ್ಧ ಪ್ರವಾಸಕ್ಕೆ ಮೂರು ಮಾದರಿಯ ಕ್ರಿಕೆಟ್ಗೆ ಭಾರತ ತಂಡವನ್ನು ಪ್ರಕಟಿಸಿದ್ದು, ಕರ್ನಾಟಕದ ಕೆಎಲ್ ರಾಹುಲ್ ಮೂರು ಮಾದರಿಯಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಬಹು ನಿರೀಕ್ಷಿತ ಟೂರ್ನಿಯಾಗಿರುವ ಭಾರತ- ಆಸ್ಟ್ರೇಲಿಯಾ ಸರಣಿಗೆ ಬಿಸಿಸಿಐ ಕೆಲವು ಅಚ್ಚರಿಯ ಆಟಗಾರರನ್ನು ಆಯ್ಕೆ ಮಾಡಿದೆ. ಹಾಗೆಯೇ ಗಾಯದಿಂದ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದಿರುವ ರೋಹಿತ್ ಶರ್ಮಾ ಹೆಸರನ್ನು ತಂಡದಲ್ಲಿ ಘೋಷಿಸಿಲ್ಲವಾದರೂ, ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಅವರ ಗಾಯದ ಪ್ರಗತಿಯನ್ನು ಬಿಸಿಸಿಐ ವೈದ್ಯಕೀಯ ತಂಡ ಮುಂದುವರಿಸಲಿದೆ ಎಂದು ಬಿಸಿಸಿಐ ತಿಳಿಸಿದೆ.
ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತು ಕೆ ಎಲ್ ರಾಹುಲ್ ಮೂರೂ ಮಾದರಿಯ ತಂಡದಲ್ಲೂ ಅವಕಾಶಗಿಟ್ಟಿಸಿಕೊಂಡಿದ್ದಾರೆ. ಮನೀಶ್ ಪಾಂಡೆ ಏಕದಿನ ಮತ್ತು ಟಿ-20 ತಂಡದಲ್ಲಿ ಮುಂದುವರೆಸಿದ್ದಾರೆ. ಕೆಎಲ್ ರಾಹುಲ್ ಏಕದಿನ ಮತ್ತು ಟಿ-20 ತಂಡಕ್ಕೆ ಉಪನಾಯಕರಾಗಿದ್ದಾರೆ.
ತಮಿಳುನಾಡಿನ ಯುವ ಬೌಲರ್ ವರುಣ್ ಚಕ್ರವರ್ತಿ 16 ಆಟಗಾರರ ಟಿ-20 ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಐಪಿಎಲ್ನಲ್ಲಿ ಸೆನ್ಷೇನಲ್ ಬೌಲರ್ ಆಗಿರುವ ನಟರಾಜನ್, ಕಾರ್ತಿಕ್ ತ್ಯಾಗಿ, ಕಮಲೇಶ್ ನಾಗರಕೋಟಿ ಇಶಾನ್ ಪೋರೆಲ್ ಹೆಚ್ಚು ಬೌಲರ್ಗಳಾಗಿ ತಂಡದ ಜೊತೆ ಪ್ರವಾಸ ಕೈಗೊಳ್ಳಲಿದ್ದಾರೆ.