ಅಹ್ಮದಾಬಾದ್ :ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯ ಕ್ವಾರ್ಟರ್ ಫೈನಲ್ನಲ್ಲಿ ಕೊನೆಯ ಓವರ್ನಲ್ಲಿ ಅಗತ್ಯವಿದ್ದ 18 ರನ್ಗಳನ್ನು ಯಶಸ್ವಿಯಾಗಿ ಸಿಡಿಸುವ ಮೂಲಕ ಬರೋಡ ತಂಡ ಸೆಮಿಫೈನಲ್ ಪ್ರವೇಶಿಸಿದೆ.
3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಷ್ಣು ಸೋಲಂಕಿ ಕೊನೆಯ 3 ಎಸೆತದಲ್ಲಿ ಅಗತ್ಯವಿದ್ದ 15 ರನ್ಗಳನ್ನು ಯಶಸ್ವಿಯಾಗಿ ಸಿಡಿಸುವ ಮೂಲಕ ಹರಿಯಾಣ ವಿರುದ್ಧ ಬರೋಡ ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಲು ನೆರವಾದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹರಿಯಾಣ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 148 ರನ್ಗಳಿಸಿತ್ತು. ಹಿಮಾಂಶು ರಾಣಾ 49, ಶಿವಂ ಚೌಹಾಣ್ 35, ಸ್ಮಿತ್ ಕುಮಾರ್ 29 ಹಾಗೂ ಚೈತನ್ಯ ಬಿಷ್ನೋಯ್ 21 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ಬರೋಡ ಪರ ಕಾರ್ತಿಕ್ ಕಾಕಡೆ 2, ಬಿ.ಪಠಾಣ್ ಮತ್ತು ಅತಿತ್ ಶೇಠ್ ತಲಾ ಒಂದು ವಿಕೆಟ್ ಪಡೆದಿದ್ದರು.
149 ರನ್ಗಳ ಗುರಿ ಪಡೆದ ಬರೋಡ ಆರಂಭದಿಂದಲೂ ನಿಧಾನಗತಿ ಆಟಕ್ಕೆ ಮೊರೆ ಹೋಯಿತು. ನಾಯಕ ಕೇದಾರ್ ದೇವಧರ್ ಮತ್ತು ಸ್ಮಿತ್ ಪಟೇಲ್(21) ಮೊದಲ ವಿಕೆಟ್ಗೆ 33 ರನ್ ಸೇರಿಸಿದರು. ಆದರೆ, 6ನೇ ಓವರ್ನಲ್ಲಿ ಕಣಕ್ಕಿಳಿದ ಚಹಾಲ್, ಪಟೇಲ್ ವಿಕೆಟ್ ಪಡೆದು ಮೇಡನ್ ಓವರ್ ಸಾಧಿಸಿದರು.