ಮುಂಬೈ: ಭಾರತ ತಂಡದ ಮಾಜಿ ಆಲ್ರೌಂಡರ್ ದಿವಂಗತ ಬಾಪು ನಾಡಕರ್ಣಿ ಇಂದಿಗೆ 57 ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟ್ನಲ್ಲಿ ಸತತ 21 ಮೇಡನ್ ಓವರ್ ಎಸೆಯುವ ಮೂಲಕ ವಿಶ್ವದಾಖಲೆ ಬರೆದಿದ್ದರು.
ಐಸಿಸಿ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಮಹತ್ವದ ವಿಶ್ವದಾಖಲೆಯ ನೆನೆಪಿಸಿಕೊಂಡಿದೆ. "1964ರ ಈ ದಿನ ಬಾಪು ನಾಡಕರ್ಣಿ ಸತತ 21 ಮೇಡನ್ ಓವರ್ಗಳ ವಿಶ್ವದಾಖಲೆ ಬರೆದಿದ್ದರು. ಒಟ್ಟಾರೆ ಪಂದ್ಯದಲ್ಲಿ ಅವರು 0.16 ಎಕಾನಮಿಯಲ್ಲಿ ಕೇವಲ 27 ರನ್ ಬಿಟ್ಟುಕೊಟ್ಟಿದ್ದರು" ಎಂದು ತಿಳಿಸಿದೆ.
ಇಂಗ್ಲೆಂಡ್ ವಿರುದ್ಧ 1964ರ ಸರಣಿಯ ಚೆನ್ನೈನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಅವರು ಸತತ 21 ಮೇಡನ್ ಓವರ್‌ಗಳನ್ನು ಮಾಡಿದ್ದರು. ಒಟ್ಟಾರೆ ಪಂದ್ಯದಲ್ಲಿ 32 ಓವರ್ ಮಾಡಿದ್ದ ಅವರು ಬಿಟ್ಟುಕೊಟ್ಟಿದ್ದು ಕೇವಲ 5 ರನ್ ಮಾತ್ರ. ಈ ಹಿಂದೆಯೂ ಅವರು ಪಾಕಿಸ್ತಾನದ ವಿರುದ್ಧವೂ 34 ಓವರ್ ಬೌಲಿಂಗ್ ಮಾಡಿ ಕೇವಲ 23 ರನ್ಬಿಟ್ಟುಕೊಟ್ಟಿದ್ದರು.
ಎಡಗೈ ಬ್ಯಾಟ್ಸ್‌ಮನ್ ಮತ್ತು ಎಡಗೈ ಸ್ಪಿನ್ನರ್ ಆಗಿದ್ದ ಅವರು ಭಾರತದ ಪರವಾಗಿ 41 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಒಂದು ಶತಕ, ಏಳು ಅರ್ಧ ಶತಕ ಸೇರಿದಮತೆ 1,414 ರನ್‌ಗಳನ್ನು ಗಳಿಸಿದ್ದರು. ಬೌಲಿಂಗ್ನಲ್ಲಿ 88 ವಿಕೆಟ್‌ಗಳನ್ನೂ ಪಡೆದಿದ್ದರು.