ಕರ್ನಾಟಕ

karnataka

ETV Bharat / sports

ವಿಶ್ವಕಪ್​ ಗೆದ್ದ ನಂತರ ಬಾಂಗ್ಲಾ ಆಟಗಾರರ ವರ್ತನೆ ಅಸಹ್ಯ ವಾಗಿತ್ತು: ಪ್ರಿಯಂ​ ಗರ್ಗ್ ​ - ಅಂಡರ್​ 19 ವಿಶ್ವಕಪ್​

ಡಿಎಲ್​ಎಸ್​ ನಿಯಮದನ್ವಯ ಬಾಂಗ್ಲಾದೇಶ ತಂಡ 3 ವಿಕೆಟ್​ಗಳಿಂದ ಜಯ ಸಾಧಿಸಿತು. ಈ ವೇಳೆ, ಕೊನೆಯ ರನ್​ ಗಳಿಸುತ್ತಿದ್ದಂತೆ ಮೈದಾನಕ್ಕಾಗಮಿಸಿದ ಬಾಂಗ್ಲಾದೇಶ ಆಟಗಾರರು ಭಾರತೀಯ ಆಟಗಾರರನ್ನು ತಳ್ಳುತ್ತಾ, ಕೆಟ್ಟದಾಗಿ ಮಾತನಾಡುತ್ತಾ ಕಿರುಚಾಡಿದ್ದಾರೆ. ಈ ವೇಳೆ ಭಾರತೀಯ ಆಟಗಾರರು ಕೂಡ ಬಾಂಗ್ಲಾದೇಶ ಆಟಗಾರರನ್ನು ತಳ್ಳಿ ಮಾತಿಗೆ ಮಾತು ಬೆಳೆಸಿದ್ದಾರೆ.

Bangladesh  dirty reaction
ಪ್ರಿಯಂ ಗರ್ಗ್​

By

Published : Feb 10, 2020, 1:41 PM IST

ಪಾಟ್‌ಚೆಫ್‌ಸ್ಟ್ರೂಮ್: 4 ಬಾರಿಯ ಅಂಡರ್​ 19 ವಿಶ್ವ ಚಾಂಪಿಯನ್ ಭಾರತ ತಂಡವನ್ನು ಫೈನಲ್​ನಲ್ಲಿ ಸೋಲಿಸಿದ ​ಬಾಂಗ್ಲಾದೇಶ ತಂಡದ ಆಟಗಾರರು ಪಂದ್ಯ ಗೆಲ್ಲುತ್ತಿದ್ದಂತೆ ಭಾರತದ ಆಟಗಾರ ಬಳಿ ಬಂದು ಅಸಹ್ಯವಾಗಿ ನಡೆದುಕೊಂಡ ಘಟನೆ ನಡೆದಿದೆ.

ಡಿಎಲ್​ಎಸ್​ ನಿಯಮದನ್ವಯ ಬಾಂಗ್ಲಾದೇಶ ತಂಡ 3 ವಿಕೆಟ್​ಗಳಿಂದ ಜಯ ಸಾಧಿಸಿತು. ಈ ವೇಳೆ, ಕೊನೆಯ ರನ್​ ಗಳಿಸುತ್ತಿದ್ದಂತೆ ಮೈದಾನಕ್ಕಾಗಮಿಸಿದ ಬಾಂಗ್ಲಾದೇಶ ಆಟಗಾರರು ಭಾರತೀಯ ಆಟಗಾರರನ್ನು ತಳ್ಳುತ್ತಾ, ಕೆಟ್ಟದಾಗಿ ಮಾತನಾಡುತ್ತಾ ಕಿರುಚಾಡಿದ್ದಾರೆ. ಈ ವೇಳೆ, ಭಾರತೀಯ ಆಟಗಾರರು ಕೂಡ ಬಾಂಗ್ಲಾದೇಶ ಆಟಗಾರರನ್ನು ತಳ್ಳಿ, ಮಾತಿಗೆ ಮಾತು ಬೆಳೆಸಿದ್ದಾರೆ.

ಈ ಘಟನೆ ಬಗ್ಗೆ ಬಹುಮಾನ ವಿತರಣೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಂ ಗರ್ಗ್​, ನಾವು ಸೋಲನ್ನು ಸುಲಭವಾಗಿ ತೆಗೆದುಕೊಂಡಿದ್ದವು, ಸೋಲು- ಗೆಲುವು ಆಟದಲ್ಲಿ ಸಾಮಾನ್ಯವಾಗಿರುತ್ತದೆ. ಆದರೆ, ಬಾಂಗ್ಲಾದೇಶದ ಆಟಗಾರರ ಪ್ರತಿಕ್ರಿಯೆ ಕೆಟ್ಟದಾಗಿತ್ತು. ಇಂತಹ ಘಟನೆ ಮತ್ತೊಮ್ಮೆ ಪುನಾರಾವರ್ತನೆಯಾಗುವುದಿಲ್ಲ ಎಂದು ಭಾವಿಸಿದ್ದೇನೆ ಎಂದು ತಿಳಿಸಿದರು.

ಬಾಂಗ್ಲಾದೇಶ ನಾಯಕ ಅಕ್ಬರ್​ ಅಲಿ ಕೂಡ ತಮ್ಮ ತಂಡದ ಆಟಗಾರರ ವರ್ತನೆಗೆ ಕ್ಷಮೆಯಾಚಿಸಿದ್ದಾರೆ. ಆ ಸಂದರ್ಭದಲ್ಲಿ ಏನಾಯಿತೆಂದು ನನಗೆ ತಿಳಿದಿಲ್ಲ, ಅಲ್ಲಿ ಏನು ನಡೆಯುತ್ತಿದೆ ಎಂದು ನಾನು ಕೇಳಲಿಲ್ಲ, ಆದರೆ, ಫೈನಲ್​ ಪಂದ್ಯದಲ್ಲಿ ಗೆಲುವು ಸಾಧಿಸಿದಾಗ ಆಟಗಾರರ ಮನಸ್ಸಿನಲ್ಲಿರುವ ಭಾವನೆಗಳು ಹೊರಬರುತ್ತವೆ. ಇದು ಕೆಲವು ಸಂದರ್ಭದಲ್ಲಿ ಭಾವನೆಗಳ ಉದ್ವೇಗದ ರೂಪದಲ್ಲಿ ಹೊರಬರುತ್ತವೆ. ಯುವ ಆಟಗಾರನಾಗಿ ನನ್ನ ಪ್ರಕಾರ, ಈ ರೀತಿ ಘಟನೆ ನಡೆಯಬಾರದು, ಯಾವುದೇ ಸಂದರ್ಭದಲ್ಲಿ, ಎಲ್ಲಿಯಾದರೂ ನಾವು ಎದುರಾಳಿಗಳನ್ನು ಗೌರವದಿಂದ ಕಾಣಬೇಕು. ನಾವು ಆಟವನ್ನು ಗೌರವದಿಂದ ಕಾಣಬೇಕು ಎಂದು ನಡೆದ ಘಟನೆ ಬಗ್ಗೆ ಕ್ಷಮೆ ಕೋರಿ ವಿಷಾದ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details