ಕೊಲೊಂಬೊ:ಕ್ವಾರಂಟೈನ್ ನಿಯಮಗಳ ಗೊಂದಲದಿಂದಾಗಿ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ನಡುವೆ ಅಕ್ಟೋಬರ್ನಲ್ಲಿ ನಡೆಯಬೇಕಿದ್ದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಸರಣಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.
ಕೋವಿಡ್ 19 ಬಿಕ್ಕಟ್ಟಿನ ಹಿನ್ನೆಲೆ ಶ್ರೀಲಂಕಾ ಸರ್ಕಾರ 7 ದಿನಗಳಿದ್ದ ಕ್ವಾರಂಟೈನ್ ಅನ್ನು ದಿಢೀರ್ 14 ದಿನಗಳಿಗೆ ಏರಿಸಿತ್ತು. ಇದಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಒಪ್ಪದ ಕಾರಣ ಇಡೀ ಟೂರ್ನಿಯೇ ಮುಂದೂಡಲ್ಪಟ್ಟಿದೆ.