ಡಾಕಾ: ಬಾಂಗ್ಲಾದೇಶ ತಂಡದ ವೇಗದ ಬೌಲರ್ ಅಬು ಜಾಯೇದ್ಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ತರಬೇತಿಗೂ ಮುನ್ನ ಮಂಗಳವಾರ ಬಿಸಿಬಿ ನಡೆಸಿದ ಕೋವಿಡ್ ಟೆಸ್ಟ್ನಲ್ಲಿ ಜಾಯೇದ್ ಹೊರತು ಪಡಿಸಿ ಉಳಿದೆಲ್ಲಾ ಆಟಗಾರರಿಗೂ ನೆಗೆಟಿವ್ ವರದಿ ಬಂದಿದೆ.

" ಬಾಂಗ್ಲಾದೇಶ ತಂಡದ ಕೌಶಲ್ಯ ಶಿಬಿರಕ್ಕೆ ಆಗಮಿಸಿದ್ದ 27 ಕ್ರಿಕೆಟಿಗರಿಂದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ 26 ಮಂದಿಗೆ ನೆಗಟಿವ್ ಫಲಿತಾಂಶ ಬಂದಿದೆ" ಎಂದು ಬಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
" ವೇಗದ ಬೌಲರ್ ಅಬು ಜಾಯೇದ್ ಚೌದರಿ ರಾಹಿ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಪಡೆದಿದ್ದಾರೆ. ಹಾಗಾಗಿ ಅವರು ಮಾರ್ಗಸೂಚಿಗಳ ಪ್ರಕಾರ ಕ್ವಾರಂಟೈನ್ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯಲಿದ್ದಾರೆ. ನಂತರ ಸರಿಯಾದ ಸಮಯದಲ್ಲಿ ಹೆಚ್ಚಿನ ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ" ಎಂದು ಬಿಸಿಬಿ ಕ್ರೀಡಾ ವೈದ್ಯ ದೆಬಾಶಿಸ್ ಚೌದರಿ ಹೇಳಿದ್ದಾರೆ.
ಮುಂದಿನ ತಿಂಗಳು ಬಾಂಗ್ಲಾದೇಶ ತಂಡ ಟೆಸ್ಟ್ ವಿಶ್ವಚಾಂಪಿಯನ್ ಭಾಗವಾಗಿ ಶ್ರೀಲಂಕಾಗೆ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಶ್ರೀಲಂಕಾ ಸರ್ಕಾರ ಕ್ವಾರಂಟೈನ್ ಅವಧಿ ಹೆಚ್ಚಿಸಿದ ಮೇಲೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಎಸ್ಎಲ್ಸಿ ನಿಯಮಗಳು ನಮಗೆ ಪೂರಕವಾಗಲ್ಲ ಎಂದು ತಿಳಿಸಿ ಟೂರ್ನಿಯಿಂದ ಹಿಂದೆ ಸರಿಯುವ ಹೇಳಿಕೆ ನೀಡಿತ್ತು.