ಕರ್ನಾಟಕ

karnataka

ETV Bharat / sports

ಸಾವಿನ ದವಡೆಯಿಂದ ಪಾರಾಗಿ ಬಂದ ತಕ್ಷಣ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್​! - ದಾಂಪತ್ಯ ಜೀವನ

ನ್ಯೂಜಿಲ್ಯಾಂಡ್​​ನ ಕ್ರೈಸ್ಟ್​ ಚರ್ಚ್​ಗೆ ಮೂರನೇ ಟೆಸ್ಟ್​ ಪಂದ್ಯ ಆಡಲು ಬಾಂಗ್ಲಾ ಕ್ರಿಕೆಟ್​ ತಂಡ ಆಗಮಿಸಿದ್ದ ವೇಳೆ ಅಲ್ಲಿನ ಮಸೀದಿ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಕ್ರಿಕೆಟರ್ಸ್​ ಪ್ರಾಣಾಪಾಯದಿಂದ ಪಾರಾಗಿದ್ದರು.

ಮೆಹಿದಿ ಹಸನ್ ಆತನ ಪತ್ನಿ ರಬಿಯಾ

By

Published : Mar 22, 2019, 7:38 PM IST

ಢಾಕಾ: ನ್ಯೂಜಿಲ್ಯಾಂಡ್​ ವಿರುದ್ಧ ಕ್ರಿಕೆಟ್​ ಆಡಲು ತೆರಳಿದ್ದ ಬಾಂಗ್ಲಾ ಕ್ರಿಕೆಟ್​ ತಂಡ ಮಸೀದಿಯಲ್ಲಿ ನಡೆದ ಗುಂಡಿನ ದಾಳಿಯಿಂದ ಕೊದಲೆಳೆ ಅಂತರದಲ್ಲಿ ಪಾರಾಗಿ ತವರಿಗೆ ವಾಪಸ್​ ಆಗಿದೆ. ಇದೀಗ ಅದೇ ತಂಡದಲ್ಲಿದ್ದ ಕ್ರಿಕೆಟಿಗನೊಬ್ಬದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.


ನ್ಯೂಜಿಲ್ಯಾಂಡ್​ ತಂಡಕ್ಕೆ ಪ್ರವಾಸ ಕೈಗೊಂಡಿದ್ದ 17 ಸದಸ್ಯರ ತಂಡದಲ್ಲಿದ್ದ ಆಫ್​ ಸ್ಪಿನ್ನರ್​ ಮೆಹಿದಿ ಹಸನ್​ ಮದುವೆಯಾಗಿದ್ದಾರೆ. ತಮ್ಮ ಬಹುದಿನದ ಗೆಳತಿ ರಬಿಯಾ ಅಖ್ತರ್​​ ಪ್ರೀತಿ ಜೊತೆ ಸಪ್ತಪದಿ ತುಳಿದಿರುವುದಾಗಿ ತಿಳಿಸಿದ್ದಾರೆ.


ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಚ್ಚಿಕೊಂಡಿರುವ ಹಸನ್​, ಇಂದಿನಿಂದ ನನ್ನ ಜೀವನದ ಹೊಸ ಜರ್ನಿ ಆರಂಭಿಸಿದ್ದೇನೆ. ಇದಕ್ಕಾಗಿ ನನಗೆ ನಿಮ್ಮೆಲ್ಲರ ಆಶಿರ್ವಾದಬೇಕು ಎಂದು ಬರೆದುಕೊಂಡಿದ್ದಾರೆ. ನ್ಯೂಜಿಲ್ಯಾಂಡ್​ನ ಕ್ರೈಸ್ಟ್​ಚರ್ಚ್​​ಗೆ ಮೂರನೇ ಟೆಸ್ಟ್​ ಪಂದ್ಯ ಆಡಲು ಬಂದಾಗ ಅಲ್ಲಿನ ಮಸೀದಿಗೆ ಕ್ರಿಕೆಟರ್​ ಭೇಟಿ ನೀಡಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು.

ABOUT THE AUTHOR

...view details