ಕರ್ನಾಟಕ

karnataka

ETV Bharat / sports

ಕಾಡಿದ ಆಫ್ಘನ್ನರ​ ಭಯ.. ತಂಡದಲ್ಲಿ ಹಲವು ಬದಲಾವಣೆ ಮಾಡಿದ ಬಾಂಗ್ಲಾ ಕ್ರಿಕೆಟ್ ತಂಡ - ರುಬೆಲ್​ ಹುಸೇನ್​ ಬಾಂಗ್ಲಾತಂಡಕ್ಕೆ ಸೇರ್ಪಡೆ. ಟಿ20 ತ್ರಿಕೋನ ಸರಣಿ

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಸೌಮ್ಯ ಸರ್ಕಾರ್‌ರನ್ನು ತಂಡದಿಂದ ಕೈಬಿಟ್ಟಿದ್ದು ಅನುಭವಿ ಬೌಲರ್​ಗಳಾದ ರುಬೆಲ್​ ಹುಸೇನ್​ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.

Bangladesh

By

Published : Sep 16, 2019, 7:38 PM IST

ಢಾಕಾ:ತವರಿನಲ್ಲಿ ನಡೆಯುತ್ತಿರುವ ಟಿ20 ತ್ರಿಕೋನ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿ ಆಫ್ಘಾನಿಸ್ತಾದ ವಿರುದ್ಧ ಸೋಲನುಭವಿಸಿದ್ದಕ್ಕೆ ಬೇಸತ್ತು ತಂಡದಲ್ಲಿ 4 ಆಟಗಾರರನ್ನು ಬದಲಿಸಿಕೊಂಡಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಸೌಮ್ಯ ಸರ್ಕಾರ್‌ರನ್ನು ತಂಡದಿಂದ ಕೈಬಿಟ್ಟಿದ್ದು ಅನುಭವಿ ಬೌಲರ್​ಗಳಾದ ರುಬೆಲ್​ ಹುಸೇನ್​ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.

ಸೌಮ್ಯ ಸರ್ಕಾರ್​ ಜೊತೆಗೆ ಸ್ಪಿನ್ನರ್​ ಮೆಹೆದಿ ಹಸನ್​, ವೇಗಿಗಳಾದ ಅಬು ಹೈದರ್​, ಯಾಸಿನ್​ ಅರಾಫತ್‌ರನ್ನು ಸಹ ಬಾಂಗ್ಲಾದೇಶ ಆಯ್ಕೆ ಸಮಿತಿ ತಂಡದಿಂದ ಡ್ರಾಪ್​ ಮಾಡಲಾಗಿದೆ. ರುಬೆಲ್​ ಜೊತೆಗೆ ಶಫೀವುಲ್​ ಇಸ್ಲಾಂ​, ಯುವ ಆಟಗಾರರಾದ ನಜ್ಮುಲ್​ ಹುಸೇನ್​,ಮೊಹ್ಮದ್​ ನಯೀಮ್​ರನ್ನು ಸರಣಿಯ ಉಳಿದ ತಂಡಗಳಿಗೆ ಆಯ್ಕೆ ಮಾಡಲಾಗಿದೆ.

ಬಾಂಗ್ಲದೇಶ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಕಷ್ಟಪಟ್ಟು ಗೆಲುವು ಸಾಧಿಸಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡದ ವಿರುದ್ಧ ಕಳಪೆ ಪ್ರದರ್ಶನ ತೋರಿ 25 ರನ್​ಗಳಿಂದ ಸೋಲನುಭವಿಸಿತ್ತು.

ABOUT THE AUTHOR

...view details