ನವದೆಹಲಿ:ಮುಂದಿನ ತಿಂಗಳು ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಟಿ-20 ಸರಣಿಗಾಗಿ ಬಾಂಗ್ಲಾದೇಶ 15 ಸದಸ್ಯರನ್ನೊಳಗೊಂಡ ತಂಡವನ್ನ ಇಂದು ಪ್ರಕಟ ಮಾಡಿದೆ.
ಆಲ್ರೌಂಡರ್ ಶಕೀಬ್ ಅಲ್ ಹಸನ್ಗೆ ನಾಯಕ ಸ್ಥಾನ ನೀಡಲಾಗಿದೆ. ವಿಶೇಷ ಅಂದರೆ 2016 ಟಿ-20 ವಿಶ್ವಕಪ್ ಟೂರ್ನಿ ವೇಳೆ ಅನುಮಾನ್ಪದ ಬೌಲಿಂಗ್ನಿಂದ ನಿಷೇಧಕ್ಕೊಳಗಾಗಿದ್ದ ಎಡಗೈ ಸ್ಪಿನ್ನರ್ ಅರಾಫತ್ ಸನ್ನಿಗೆ ಚಾನ್ಸ್ ನೀಡಲಾಗಿದೆ.ಈತ 2017ರಲ್ಲಿ ತನ್ನ ಗೆಳತಿಯೊಂದಿಗಿನ ಅಶ್ಲೀಲ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿದ್ದಕ್ಕಾಗಿ 2 ತಿಂಗಳು ಜೈಲು ವಾಸ ಅನುಭವಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಮಿನ್ಹಾಜುಲ್ ಅಬೆದಿನ್, ಭಾರತದಂತಹ ಕಠಿಣ ತಂಡವನ್ನ ಎದುರಿಸಬೇಕಾದರೆ ಅನುಭವಿ ಆಟಗಾರರ ಅವಶ್ಯಕತೆ ಇದೆ. ಹೀಗಾಗಿ ಅರಾಫತ್ ಸನ್ನಿಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.
ಅಲ್ಲದೆ 2016ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಆಡಿದ್ದ ಅಲ್-ಅಮಿನ್ ಹೊಸೈನ್ಗೂ ಮಣೆ ಹಾಕಲಾಗಿದೆ. ಅಫ್ಘಾನಿಸ್ತಾನ ಮತ್ತು ಜಿಂಬಾಂಬ್ವೆ ವಿರುದ್ಧದ ತ್ರಿಕೋನ ಸರಣಿಯಿಂದ ಹೊರಗುಳಿದಿದ್ದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
15 ಆಟಗಾರರ ತಂಡ ಇಂತಿದೆ:
ಶಕೀಬ್ ಅಲ್ ಹಸನ್(ನಾಯಕ), ತಮೀಮ್ ಇಕ್ಬಾಲ್, ಲಿಟಾನ್ ದಾಸ್, ಸೌಮ್ಯ ಸರ್ಕಾರ್, ನೈಮ್ ಶೇಖ್, ಮುಶ್ಫಿಕರ್ ರಹೀಮ್ (ಕೀಪರ್), ಮಹಮದುಲ್ಲಾ ರಿಯಾದ್, ಅಫಿಫ್ ಹೊಸೈನ್, ಮುಸದ್ದೇಕ್ ಹೊಸೈನ್, ಅಮೀನುಲ್ ಇಸ್ಲಾಂ ಬಿಪ್ಲೋಬ್, ಅರಾಫತ್ ಸನ್ನಿ, ಮೊಹಮ್ಮದ್ ಸೈಫುದ್ದೀನ್, ಅಲ್-ಅಮೀನ್ ಹೊಸೈನ್, ಮುಸ್ತಫಿಜುರ್ ರಹಮಾನ್, ಶೈಫುಲ್ ಇಸ್ಲಂ,
ನವೆಂಬರ್ 3 ರಂದು ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮೊದಲ ಟಿ-20 ಪಂದ್ಯ ನಡೆದರೆ, 2ನೇ ಪಂದ್ಯ ನ.7ಕ್ಕೆ ರಾಜ್ಕೋಟ್ ಮತ್ತು ಮೂರನೇ ಪಂದ್ಯ ನ.10ಕ್ಕೆ ನಾಗ್ಪುರ್ನಲ್ಲಿ ನಡೆಯಲಿದೆ. ಇದೇ ತಿಂಗಳ 24 ರಂದು ಟೀಂ ಇಂಡಿಯಾ ಕೂಡ 15 ಆಟಗಾರರ ತಂಡ ಪ್ರಕಟಿಸಲಿದೆ.