ಕರ್ನಾಟಕ

karnataka

ETV Bharat / sports

ವಿಶ್ವಕಪ್​​ ಸೆಮೀಸ್​​ನಲ್ಲಿ ಧೋನಿಗೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್:  ನನ್ನೊಬ್ಬನ ನಿರ್ಧಾರವಲ್ಲ ಎಂದ ಬಂಗಾರ್​ - ಬ್ಯಾಟಿಂಗ್​ ಕೋಚ್​ ಸಂಜಯ್​ ಬಂಗಾರ್​

ಕ್ರಿಕೆಟ್​​ ವಿಶ್ವಕಪ್​ ಸೆಮಿಫೈನಲ್​​​ ಪಂದ್ಯದಲ್ಲಿ ಧೋನಿಗೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿಸಿರುವುದು ನನ್ನೊಬ್ಬನ ನಿರ್ಧಾರವಲ್ಲ ಎಂದು ಟೀಂ ಇಂಡಿಯಾ ಬ್ಯಾಟಿಂಗ್​ ಕೋಚ್​ ಸಂಜಯ್​ ಬಂಗಾರ್​​ ಹೇಳಿಕೆ ನೀಡಿದ್ದಾರೆ.

ಬ್ಯಾಟಿಂಗ್​ ಕೋಚ್​ ಸಂಜಯ್​ ಬಂಗಾರ್​​

By

Published : Aug 2, 2019, 4:33 PM IST

ನವದೆಹಲಿ:ಐಸಿಸಿ ಏಕದಿನ ವಿಶ್ವಕಪ್​ ಸೆಮಿಫೈನಲ್​​ನಲ್ಲಿ ಟೀಂ ಇಂಡಿಯಾ ಹಿರಿಯ ಆಟಗಾರ ಎಂಎಸ್​ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿದ್ದು ಅನೇಕ ವಿವಾದಗಳಿಗೆ ಕಾರಣವಾಗಿತ್ತು. ಇದೀಗ ಟೀಂ ಇಂಡಿಯಾ ಬ್ಯಾಟಿಂಗ್​​ ಕೋಚ್​ ಸಂಜಯ್​ ಬಂಗಾರ್​ ಇದೇ ವಿಷಯವಾಗಿ ಮಾತನಾಡಿದ್ದಾರೆ.

ವಿಶ್ವಕಪ್​ ಸೆಮಿಫೈನಲ್​​ನಲ್ಲಿ ದಿನೇಶ್​ ಕಾರ್ತಿಕ್​ ಹಾಗೂ ಹಾರ್ದಿಕ್​ ಪಾಂಡ್ಯ ಬ್ಯಾಟ್​​ ಬೀಸಿದ ಬಳಿಕ ಮೈದಾನಕ್ಕಿಳಿದಿದ್ದ ಧೋನಿ, ಕೊನೆ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿದ್ದರು. ಅವರ ಬ್ಯಾಟಿಂಗ್​ ಕ್ರಮಾಂಕದ ಬಗ್ಗೆ ಅನೇಕ ಕ್ರಿಕೆಟ್​ ದಿಗ್ಗಜರು ಹಾಗೂ ಸುಪ್ರೀಂಕೋರ್ಟ್​​ನ ಸಿಎಸಿ ಸಮಿತಿ ಕೂಡ ಇದೇ ವಿಷಯವಾಗಿ ಆಕ್ರೋಶ ವ್ಯಕ್ತ ಪಡಿಸಿತ್ತು.

ಎಂಎಸ್​ ಧೋನಿ
ಇದೀಗ ಮಾತನಾಡಿರುವ ಬ್ಯಾಟಿಂಗ್​ ಕೋಚ್​ ಸಂಜಯ್​ ಬಂಗಾರ್​, ವಿಶ್ವಕಪ್​ ಸಮಿಫೈನಲ್​​ನಲ್ಲಿ ಧೋನಿ ಅವರನ್ನ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಲು ಕಳುಸಿದ್ದು ನನ್ನೊಬ್ಬನ ನಿರ್ಧಾರವಾಗಿರಲಿಲ್ಲ ಎಂದಿದ್ದಾರೆ.

ಆರಂಭದಲ್ಲೇ ನಾವು ಬೇಗ ವಿಕೆಟ್​ ಕಳೆದುಕೊಂಡಿದ್ದರಿಂದ ಮಧ್ಯಮ ಕ್ರಮಾಂಕದಲ್ಲಿ ಕೆಲ ಹೊತ್ತು ಮೈದಾನದಲ್ಲಿ ನಿಂತು ಬ್ಯಾಟ್​ ಬೀಸುವ ಆಟಗಾರರ ಅವಶ್ಯಕತೆ ನಮಗೆ ಬೇಕಾಗಿತ್ತು. ಹೀಗಾಗಿ ದಿನೇಶ್​ ಕಾರ್ತಿಕ್​ಗೆ 5ನೇ ಕ್ರಮಾಂಕಕ್ಕೆ ಬಡ್ತಿ ನೀಡಿ, ಧೋನಿ ಅವರನ್ನ 7ನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡುವಂತೆ ತಿಳಿಸಲಾಗಿತ್ತು. ಇದು ಕೊಹ್ಲಿಗೆ ಕೂಡಾ ಗೊತ್ತಿತ್ತು. ಕೋಚ್​ ರವಿಶಾಸ್ತ್ರಿ ಕೂಡ ಇದೇ ವಿಷಯವಾಗಿ ಡ್ರೆಸ್ಸಿಂಗ್​ ರೂಂನಲ್ಲಿ ಎಲ್ಲರೊಂದಿಗೂ ಮಾತನಾಡಿದ್ದರು ಎಂದು ತಿಳಿಸಿದ್ದರು.

ನಾವು ಸೆಮಿಫೈನಲ್​​ನಲ್ಲಿ ಸೋಲು ಕಂಡ ಬಳಿಕ ಮಾತನಾಡಿದ್ದು, ಧೋನಿಯನ್ನ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಲು ಕಳುಹಿಸಿದ್ದು ತಂಡದ ನಿರ್ಧಾರವಾಗಿತ್ತು ಎಂದು ಸಂಜಯ್ ಬಂಗಾರ್​ ತಿಳಿಸಿದ್ದಾರೆ.

ABOUT THE AUTHOR

...view details