ಢಾಕಾ:ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬಂಗಬಂಧು ಟಿ-20 ಕಪ್ ಟೂರ್ನಿ ವೇಳೆ ವಿಕೆಟ್ ಕೀಪರ್ ಮುಶ್ಫಿಕರ್ ರಹೀಮ್ ಕೋಪಗೊಂಡು ಸಹ ಆಟಗಾರನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಬಂಗ ಬಂಧು ಟಿ-20 ಕಪ್ ಟೂರ್ನಿಯಲ್ಲಿ ಅಗ್ರ ನಾಲ್ಕು ತಂಡಗಳು ಪ್ಲೇ ಆಫ್‌ನಲ್ಲಿ ಸ್ಥಾನ ಪಡೆದಿವೆ. ಬೆಕ್ಸಿಮ್ಕೊ ಢಾಕಾ ಮತ್ತು ಫಾರ್ಚೂನ್ ಬಾರಿಶಾಲ್ ಸೋಮವಾರ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮುಶ್ಫಿಕರ್ ರಹೀಮ್ ನೇತೃತ್ವದ ಢಾಕಾ ತಂಡವು ಒಂಬತ್ತು ರನ್ಗಳಿಂದ ಜಯಸಾಧಿಸಿದೆ.
ಇದೇ ಪಂದ್ಯದಲ್ಲಿ ನಾಯಕ ಮುಶ್ಫಿಕರ್ ರಹೀಮ್ ತನ್ನ ತಂಡದ ಸಹ ಆಟಗಾರ ನಸುಮ್ ಅಹ್ಮದ್ ಅವರ ಮೇಲೆ ಕೋಪಗೊಂಡು ಹೊಡೆಯಲು ಹೋದ ಘಟನೆ ನಡೆದಿದೆ.
ಬರಿಶಾಲ್ ತಂಡ 19 ಎಸೆತಗಳಲ್ಲಿ 45 ರನ್ ಗಳಿಸಬೇಕಾಗಿತ್ತು. ಉತ್ತಮವಾಗಿ ಬಾಟ್ ಬೀಸುತ್ತಿದ್ದ ಆಸೀಫ್ ಹೊಸೈನ್ ಬೌಡರಿ ಬಾರಿಸುವ ಯತ್ನದಲ್ಲಿ ಚೆಂಡನ್ನು ಫೈನ್-ಲೆಗ್ ಕಡೆಗೆ ಬಾರಿಸಿದ್ರು. ಫೈನ್ - ಲೆಗ್ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ನಸುಮ್ ಅಹ್ಮದ್ ಕ್ಯಾಚ್ಗಾಗಿ ಕಾಯುತಿದ್ರು. ಆದರೆ, ಓಡಿ ಹೋದ ವಿಕೆಟ್ ಕೀಪರ್ ರಹೀಂ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದ್ರು.
ಆದರೆ ತಾನು ಬಂದರೂ ಕ್ಯಾಚ್ ಹಿಡಿಯಲು ದಾರಿ ಮಾಡಿಕೊಡದ ಸಹ ಆಟಗಾರನ ಮೇಲೆ ಕೋಪಗೊಂಡ ರಹೀಮ್ ಕೈ ಮಾಡಲು ಯತ್ನಿಸಿದ ಘಟನೆ ನಡೆಯಿತು. ಇದರಿಂದ ಮೈದಾನದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.