ಕರ್ನಾಟಕ

karnataka

ETV Bharat / sports

ಎಲ್ಲಾ ಮಾದರಿಯ ಕ್ರಿಕೆಟ್​ಗೆ ಬಾಲ್ಬಿರ್ನಿಯನ್ನು ನಾಯಕನನ್ನಾಗಿ ನೇಮಿಸಿದ ಐರ್ಲೆಂಡ್!

11 ವರ್ಷಗಳಿಂದ ಏಕದಿನ ಹಾಗೂ ಟೆಸ್ಟ್​ ತಂಡದ ನಾಯಕನಾಗಿರಾಗಿದ್ದ ವಿಲಿಯಂ ಫೋರ್ಟ್​ಫೀಲ್ಡ್​ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ಬಾಲ್ಬಿರ್ನಿಯನ್ನು ಎರಡೂ ಮಾದರಿಯ ತಂಡಕ್ಕೆ ನಾಯಕನಾಗಿ ನೇಮಿಸಲಾಗಿತ್ತು. ಇಂದು ಟಿ-20 ತಂಡಕ್ಕೂ ನಾಯಕನನ್ನಾಗಿ ಆಯ್ಕೆ ಮಾಡಿದೆ.

Balbirnie to captain Ireland in all formats
Balbirnie to captain Ireland in all formats

By

Published : Nov 30, 2019, 7:07 PM IST

ನವದೆಹಲಿ: ಟಿ-20 ವಿಶ್ವಕಪ್​ ಹತ್ತಿರ ಬರುತ್ತಿದ್ದಂತೆ ಐರ್ಲೆಂಡ್​ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಎಲ್ಲಾ ಮಾದರಿಯ ಕ್ರಿಕೆಟ್​ಗೆ ಯುವ ಬ್ಯಾಟ್ಸ್​ಮನ್ ಆ್ಯಂಡಿ ಬಾಲ್ಬಿರ್ನಿಯನ್ನು ನಾಯಕನನ್ನಾಗಿ ನೇಮಿಸಿದೆ.

11 ವರ್ಷಗಳಿಂದ ಏಕದಿನ ಹಾಗೂ ಟೆಸ್ಟ್​ ತಂಡದ ನಾಯಕನಾಗಿರಾಗಿದ್ದ ವಿಲಿಯಂ ಫೋರ್ಟ್​ಫೀಲ್ಡ್​ ನಾಯಕತ್ವದಿಂದ ಕೇಳಗಿಳಿದ ಬೆನ್ನಲ್ಲೇ ಬಾಲ್ಬಿರ್ನಿಯನ್ನು ಎರಡೂ ಮಾದರಿಯ ತಂಡಕ್ಕೆ ನಾಯಕನಾಗಿ ನೇಮಿಸಲಾಗಿತ್ತು. ಇಂದು ಟಿ-20 ತಂಡಕ್ಕೂ ನಾಯಕನನ್ನಾಗಿ ಆಯ್ಕೆ ಮಾಡಿದೆ.

ಕಳೆದ 18 ತಿಂಗಳಿನಿಂದ ನಾಯಕರಾಗಿದ್ದ 33 ವರ್ಷದ ಗ್ಯಾರಿ ವಿಲ್ಸನ್​ರ ಜೊತೆ ಚರ್ಚೆ ನಡೆಸಿ ಐರ್ಲೆಂಡ್​ ಕ್ರಿಕೆಟ್​ ಕ್ಲಬ್​ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಆ್ಯಂಡಿ ಬಾಲ್ಬಿರ್ನಿ 64 ಏಕದಿನ ಪಂದ್ಯ, 37 ಟಿ-20 ಹಾಗೂ 3 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್​ನಲ್ಲಿ 146, ಏಕದಿನ ಕ್ರಿಕೆಟ್​ನಲ್ಲಿ 1813 ಹಾಗೂ ಟಿ-20ಯಲ್ಲಿ 790 ರನ್​ ಗಳಿಸಿದ್ದಾರೆ.

ಬಾಲ್ಬಿರ್ನಿ ನಾಯಕತ್ವದಲ್ಲಿ ಜನವರಿ 7ರಂದು ವೆಸ್ಟ್​ ಇಂಡೀಸ್​ ವಿರುದ್ಧ ಮೊದಲ ಟಿ-20 ಪಂದ್ಯ ನಡೆಯಲಿದೆ.

ABOUT THE AUTHOR

...view details