ಗಾಲೆ:ಜೋ ರೂಟ್ ದ್ವಿಶತಕ ಹಾಗೂ ಬೌಲರ್ಗಳ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡ ಅತಿಥೇಯ ಶ್ರೀಲಂಕಾ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸಿ, ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಲಂಕಾ ಕೇವಲ 135 ರನ್ ಗಳಿಸಿದರೆ, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 421 ರನ್ ಗಳಿಸಿತ್ತು. 286 ರನ್ಗಳ ಬೃಹತ್ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದ್ದ ಆತಿಥೇಯ ತಂಡ 4ನೇ ದಿನವರೆಗೂ ವೀರೋಚಿತ ಹೋರಾಟ ನಡೆಸಿ 359 ರನ್ಗಳಿಗೆ ಆಲೌಟ್ ಆಗುವ ಮೂಲಕ ಇಂಗ್ಲೆಂಡ್ಗೆ 74 ರನ್ಗಳ ಗುರಿ ನೀಡಿತ್ತು.
74 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಭಾನುವಾರದಾಂತ್ಯಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ಸೋಮವಾರ ಯಾವುದೇ ವಿಕೆಟ್ ಕಳೆದುಕೊಳ್ಳದೇ ಗುರಿ ತಲುಪಿ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿತು.
ಜಾನಿ ಬ್ಯೈರ್ಸ್ಟೋವ್ ಅಜೇಯ 35 ರನ್ ಗಳಿಸಿದರೆ, ಡೇನಿಯಲ್ ಲಾರೆನ್ಸ್ ಅಜೇಯ 21 ರನ್ ಗಳಿಸಿ ಗೆಲುವಿನ ರೂವಾರಿಯಾದರು.
ಮೊದಲ ಇನ್ನಿಂಗ್ಸ್ನಲ್ಲಿ 228 ರನ್ ಗಳಿಸಿದ್ದ ಆಂಗ್ಲರ ನಾಯಕ ಜೋ ರೂಟ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್:
- ಶ್ರೀಲಂಕಾ ಮೊದಲ ಇನ್ನಿಂಗ್ಸ್ 135-10: ಚಂಡಿಮಾಲ್ 28, ಡಾಮ್ ಬೆಸ್ 30ಕ್ಕೆ5,ಬ್ರಾಡ್ 20ಕ್ಕೆ 3.
- ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 421-10: ಜೋ ರೂಟ್ 228, ಡೇನಿಯಲ್ ಲಾರೆನ್ಸ್ 73, ದಿಲ್ರುವಾನ್ ಪೆರೆರಾ 109ಕ್ಕೆ 4, ಎಂಬುಲ್ಡೆನಿಯಾ 176ಕ್ಕೆ 3
- ಶ್ರೀಲಂಕಾ 2ನೇ ಇನ್ನಿಂಗ್ಸ್ 359-10: ಕುಸಾಲ್ ಪೆರೆರಾ 62, ತಿರುಮನ್ನೆ 111, ಮ್ಯೂಥ್ಯೂಸ್ 71, ಸ್ಯಾಮ್ ಕರ್ರನ್ 37ಕ್ಕೆ2, ಡಾಮ್ ಬೆಸ್ 100ಕ್ಕೆ 3, ಜಾಕ್ ಲೀಚ್ 122ಕ್ಕೆ 5
- ಇಂಗ್ಲೆಂಡ್ 2ನೇ ಇನ್ನಿಂಗ್ಸ್ 76ಕ್ಕೆ 3: ಜಾನಿ ಬೈರ್ಸ್ಟೋವ್ ಅಜೇಯ 35, ಲಾರೆನ್ಸ್ ಅಜೇಯ 21, ಎಂಬುಲ್ಡೆನಿಯಾ 29ಕ್ಕೆ 2
ಇದನ್ನು ಓದಿ: ನೋವು, ನಿಂದನೆ, ಅವಮಾನ ಮೆಟ್ಟಿ ನಿಂತ ಸಿರಾಜ್: ಪ್ರಸಕ್ತ ಸರಣಿಯಲ್ಲಿ 5 ವಿಕೆಟ್ ಪಡೆದ ಏಕೈಕ ಭಾರತೀಯ