ಲಾಹೋರ್ :ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರ ತಾಳ್ಮೆಯ ಸ್ವಭಾವವೇ ವಿರಾಟ್ ಕೊಹ್ಲಿ ಅವರನ್ನು ಮೀರಿಸುವಂತೆ ಮಾಡುತ್ತಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಕ್ಲೇನ್ ಮುಷ್ತಾಕ್ ಹೇಳಿದ್ದಾರೆ.
ಕೊರೊನಾ ಲಾಕ್ಡೌನ್ನಿಂದ ಕಳೆದೆರಡು ಮೂರು ವಾರಗಳಿಂದ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಜೊತೆ ಪಾಕ್ ಯುವ ಬ್ಯಾಟ್ಸ್ಮನ್ ಬಾಬರ್ ಅಜಮ್ ಜೊತೆ ಹೋಲಿಕೆ ಮಾಡುತ್ತಿದ್ದಾರೆ. ಇದೀಗ ಮಾಜಿ ಪಾಕಿಸ್ತಾನ ಆಟಗಾರ ಸಕ್ಲೇನ್ ಮುಷ್ತಾಕ್ ಕೂಡ ಇಬ್ಬರು ಪ್ರತಿಭಾವಂತ ಆಟಗಾರರ ಹೋಲಿಕೆ ಮಾಡಿದ್ದಲ್ಲದೆ ಅದಕ್ಕೆ ಕಾರಣವನ್ನು ನೀಡಿದ್ದಾರೆ.
ವಿರಾಟ್ ಕೊಹ್ಲಿ ಅವರ ಆಕ್ರಮಣಶೀಲತೆಯನ್ನು ಮೆಚ್ಚಿಕೊಂಡಿರುವ ಸಕ್ಲೇನ್, ಬಾಬರ್ ಅಜಮ್ರ ವಿನಮ್ರತಾ ಭಾವನೆ ಕೊಹ್ಲಿಯನ್ನು ಮೀರಿಸುವಂತೆ ಮಾಡಿದೆ ಎಂದು ಬಹಿರಂಗ ಪಡಿಸಿದ್ದಾರೆ. ಆದರೂ ಈ ಇಬ್ಬರು ಪ್ರತಿಭಾವಂತ ಬ್ಯಾಟ್ಸ್ಮನ್ಗಳ ಹೋಲಿಕೆಯನ್ನು ಮಾಡುವುದು ಸರಿಯಲ್ಲ ಎಂದಿರುವ ಅವರು, ವಿಶ್ವ ಕ್ರಿಕೆಟ್ನಲ್ಲಿ ಬಾಬರ್, ಕೊಹ್ಲಿಗಿಂತ ಹೆಚ್ಚಿನ ಅನುಭವವಿದೆ. ಇವರಿಬ್ಬರ ಅನುಭವವನ್ನು ಪರಿಗಣಿಸಿದರೆ ವಿಶ್ವವೇದಿಕೆಯಲ್ಲಿ ಹೋಲಿಕೆ ಮಾಡುವುದು ಅನ್ಯಾಯವಾಗಲಿದೆ ಎಂದು ಸಕ್ಲೇನ್ ಹೇಳಿದ್ದಾರೆ.