ಬರ್ಮಿಂಗ್ಹ್ಯಾಮ್: ಪಾಕಿಸ್ತಾನದ ಬಾಬರ್ ಅಜಂ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 3000 ರನ್ ದಾಖಲಿಸಿದ ಏಷ್ಯಾದ ಮೊದಲ ಹಾಗೂ ವಿಶ್ವದ 2ನೇ ಆಟಗಾರ ಎಂದ ದಾಖಲೆಗೆ ಪಾತ್ರರಾಗಿದ್ದಾರೆ.
ವಿಶ್ವಕಪ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಬಾಬರ್ ಈ ದಾಖಲೆಗೆ ಪಾತ್ರರಾಗಿದ್ದಾರೆ. 68 ಇನ್ನಿಂಗ್ಸ್ಗಳಲ್ಲಿ 3000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
ಈ ಮೂಲಕ ವಿಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್(69), ಗ್ರೀನಿಡ್ಜ್(72), ದಕ್ಷಿಣ ಆಫ್ರಿಕಾದ ಗ್ಯಾರಿ ಕಸ್ಟರ್ನ್(72) ಭಾರತದ ಶಿಖರ್ ಧವನ್(72), ಇಂಗ್ಲೆಂಡ್ನ ರೂಟ್(72) ಕಿವೀಸ್ನ ವಿಲಿಯಮ್ಸನ್(73) ಹಾಗೂ ವಿರಾಟ್ ಕೊಹ್ಲಿ(74) ದಾಖಲೆ ಬ್ರೇಕ್ ಮಾಡಿದ್ದಾರೆ.
ಇನ್ನು ಮೊದಲ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ ಇದ್ದು, ಅವರು ಕೇವಲ 57 ಇನ್ನಿಂಗ್ಸ್ಗಳಲ್ಲಿ 3000 ರನ್ಗಳಿಸಿದ್ದಾರೆ.