ಕರ್ನಾಟಕ

karnataka

ETV Bharat / sports

ಪದಾರ್ಪಣೆ ಪಂದ್ಯದಲ್ಲೇ ಅಶ್ವಿನ್, ಮಿಶ್ರಾ ಲಿಸ್ಟ್​ ಸೇರಿದ ಅಕ್ಸರ್ ಪಟೇಲ್ - ವಿವಿ ಕುಮಾರ್​

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಅಕ್ಷರ್ ಪಟೇಲ್ ಇಂಗ್ಲೆಂಡ್ ತಂಡದ ಡೊಮೆನಿಕ್ ಸಿಬ್ಲೆ, ಜ್ಯಾಕ್ ಲೀಚ್, ನಾಯಕ ಜೋ ರೂಟ್, ಒಲ್ಲಿ ಪೋಪ್ ಮತ್ತು ಒಲ್ಲಿ ಸ್ಟೋನ್ ವಿಕೆಟ್​ ಪಡೆಯುವ ಮೂಲಕ ತಮ್ಮ ಪದಾರ್ಪಣೆ ಪಂದ್ಯದಲ್ಲಿ 5 ವಿಕೆಟ್​ ಪಡೆದ ಭಾರತದ 2ನೇ ಎಡಗೈ ಸ್ಪಿನ್ನರ್​, 6ನೇ ಸ್ಪಿನ್ನರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಅಕ್ಸರ್ ಪಟೇಲ್
ಅಕ್ಸರ್ ಪಟೇಲ್

By

Published : Feb 16, 2021, 4:01 PM IST

ಚೆನ್ನೈ: ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿ ಬೃಹತ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಡಗೈ ಸ್ಪಿನ್ನರ್​ ಅಕ್ಷರ್ ಪಟೇಲ್ ದಾಖಲೆ ಪದಾರ್ಪಣೆ ಪಂದ್ಯದಲ್ಲಿ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಅಕ್ಷರ್ ಪಟೇಲ್ ಇಂಗ್ಲೆಂಡ್ ತಂಡದ ಡೊಮೆನಿಕ್ ಸಿಬ್ಲೆ, ಜ್ಯಾಕ್ ಲೀಚ್, ನಾಯಕ ಜೋ ರೂಟ್, ಒಲ್ಲಿ ಪೋಪ್ ಮತ್ತು ಒಲ್ಲಿ ಸ್ಟೋನ್ ವಿಕೆಟ್​ ಪಡೆಯುವ ಮೂಲಕ ತಮ್ಮ ಪದಾರ್ಪಣೆ ಪಂದ್ಯದಲ್ಲಿ 5 ವಿಕೆಟ್​ ಪಡೆದ ಭಾರತದ 2ನೇ ಎಡಗೈ ಸ್ಪಿನ್ನರ್​, 6ನೇ ಸ್ಪಿನ್ನರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಕ್ಷರ್ ಪಟೇಲ್ 302ನೇ ಟೆಸ್ಟ್​ ಆಟಗಾರನಾಗಿ ಭಾರತದ ಪರ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ಈ ಹಿಂದೆ ಭಾರತದ ಪರ 1960-61ರಲ್ಲಿ ಪಾಕಿಸ್ತಾನ ವಿರುದ್ಧ ವಿವಿ ಕುಮಾರ್ ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್ ಎಂಬ ಕೀರ್ತಿಗೆ ವಿವಿ ಕುಮಾರ್ ಪಾತ್ರರಾಗಿದ್ದರು. ನಂತರ 1979-80 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಡಿಆರ್​ ದೋಶಿ ,1987-88ರಲ್ಲಿ ವಿಂಡೀಸ್ ವಿರುದ್ಧ ಎನ್​ಡಿ ಹಿರ್ವಾನಿ , 2008-09ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಮಿತ್ ಮಿಶ್ರಾ , 2011-12ರಲ್ಲಿ ವಿಂಡೀಸ್ ವಿರುದ್ಧ ಆರ್ ಆಶ್ವಿನ್ ಕೂಡ ಪದಾರ್ಪಣೆ ಪಂದ್ಯದಲ್ಲೇ 5 ವಿಕೆಟ್​ ಸಾಧನೆ ಮಾಡಿದ್ದರು.

ಇದನ್ನು ಓದಿ:ಕೋಚ್​ ಹುದ್ದೆಗೆ ರಾಜೀನಾಮೆ: ವಾಸೀಂ ಜಾಫರ್​ ಪ್ರಕರಣ ತನಿಖೆಗೆ ಉತ್ತರಾಖಂಡ ಸಿಎಂ ಆದೇಶ!

ABOUT THE AUTHOR

...view details