ಕರ್ನಾಟಕ

karnataka

ETV Bharat / sports

ಸೆಪ್ಟೆಂಬರ್​ನಲ್ಲಿ ಆಸೀಸ್ - ಇಂಗ್ಲೆಂಡ್ ನಡುವೆ ಟಿ - 20 ಸರಣಿ - ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ಟಿ 20 ಸರಣಿ

ವಿಂಡೀಸ್ ಮತ್ತು ಪಾಕ್​ ವಿರುದ್ಧ ಕ್ರಿಕೆಟ್ ಸರಣಿ ಆಯೋಜಿಸಿದ ಇಂಗ್ಲೆಂಡ್, ಇದೀಗ ಆಸೀಸ್ ವಿರುದ್ಧ ಕೂಡ ಸರಣಿ ಆಯೋಜಿಸಲು ಸಿದ್ಧವಾಗಿದೆ.

Australia's limited-overs tour of England
ಸೆಪ್ಟೆಂಬರ್​ನಲ್ಲಿ ಆಸೀಸ್-ಇಂಗ್ಲೆಂಡ್ ನಡುವೆ ಟಿ-20 ಸರಣಿ

By

Published : Aug 14, 2020, 1:21 PM IST

ಲಂಡನ್: ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳ ಆತಿಥ್ಯ ವಹಿಸಿದ ನಂತರ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತಮ್ಮ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ಟಿ - 20 ಸರಣಿ ಆಯೋಜಿಸಲು ಸಜ್ಜಾಗಿದೆ.

ಪಂದ್ಯಗಳನ್ನು ಹ್ಯಾಂಪ್‌ಶೈರ್‌ನ ದಿ ಏಗಾಸ್ ಬೌಲ್ ಮತ್ತು ಲಂಕಾಷೈರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫೋರ್ಡ್‌ನಲ್ಲಿ ಆಯೋಜಿಸಿದೆ. ಉಭಯ ತಂಡಗಳು ಸೆಪ್ಟೆಂಬರ್ 4 ರಿಂದ ಮೂರು ಟಿ-20 ಮತ್ತು ಏಕದಿನ ಪಂದ್ಯಗಳನ್ನು ಆಡಲಿವೆ.

ಆಗಸ್ಟ್ 27 ರಂದು ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್​ಗೆ ಆಗಮಿಸಲಿದೆ ಮೂರು ಪಂದ್ಯಗಳ ಟಿ- 20 ಸರಣಿ ಪ್ರಾರಂಭವಾಗುವ ಮೊದಲು ಆಸ್ಟ್ರೇಲಿಯಾ 50 ಓವರ್‌ಗಳ ಇಂಟ್ರಾ-ಸ್ಕ್ವಾಡ್ ಅಭ್ಯಾಸ ಪಂದ್ಯ ಮತ್ತು ಮೂರು ಟಿ-20 ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಮೂರು ಅಂತಾರಾಷ್ಟ್ರೀಯ ಪಂದ್ಯಗಳು ಸೆಪ್ಟೆಂಬರ್ 11, ಸೆಪ್ಟೆಂಬರ್ 13 ರಂದು ಮತ್ತು ಸೆಪ್ಟೆಂಬರ್ 16 ರಂದು ಅಂತಿಮ ಪಂದ್ಯ ನಡೆಯಲಿದೆ. ಮೂರು ಏಕದಿನ ಪಂದ್ಯಗಳು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಲಿವೆ.

"ಈ ಪ್ರವಾಸವನ್ನು ಕೈಗೊಳ್ಳುವಲ್ಲಿ ಅವರು ಮಾಡಿದ ಪ್ರಯತ್ನಗಳಿಗಾಗಿ ನಾವು ಕ್ರಿಕೆಟ್ ಆಸ್ಟ್ರೇಲಿಯಾದ ಆಟಗಾರರು, ಸಿಬ್ಬಂದಿ ಮತ್ತು ನಿರ್ವಾಹಕರಿಗೆ ಕೃತಜ್ಞತೆ ತಿಳಿಸುತ್ತೇವೆ ಎಂದು ಇಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಾಮ್ ಹ್ಯಾರಿಸನ್ ಹೇಳಿದ್ದಾರೆ.

ABOUT THE AUTHOR

...view details