ಪರ್ತ್(ಆಸ್ಟ್ರೇಲಿಯಾ):2019ರಲ್ಲಿ ಆಡಿದ ಟೆಸ್ಟ್ ಪಂದ್ಯಗಳಿಂದ ಸಾವಿರ ರನ್ ಪೂರೈಸಿದ ಏಕೈಕ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಆಸ್ಟ್ರೇಲಿಯಾದ ಆಟಗಾರ, ಮಾರ್ನಸ್ ಲಾಬುಶೇನ್ಭಾಜನರಾಗಿದ್ದಾರೆ.
ಈ ವರ್ಷ ಒಟ್ಟು 10 ಟೆಸ್ಟ್‌ಗಳ 15 ಇನಿಂಗ್ಸ್‌ಗಳಲ್ಲಿ 3 ಶತಕ ಹಾಗೂ ಆರು ಅರ್ಧಶತಕಗಳೊಂದಿಗೆ 68.13ರ ಸರಾಸರಿಯಲ್ಲಿ ಒಟ್ಟು 1,022 ರನ್ ಗಳಿಸಿದ್ದಾರೆ.
ಅಷ್ಟೇ ಅಲ್ಲ, ಸದ್ಯ ಜರುಗುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಪಿಂಕ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ (143) ಹಾಗೂ 2ನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ (50) ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಸ್ಟಿವ್ ಸ್ಮಿತ್ ಇದ್ದಾರೆ.
ಪ್ರಸ್ತುತ ಗುರುವಾರ ಆರಂಭವಾದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ಗಳನ್ನು ಗಳಿಸಿ ಆಲೌಟ್ ಆಗಿತ್ತು. ಇದನ್ನು ಬೆನ್ನಟ್ಟಿದ್ದ ನ್ಯೂಜಿಲ್ಯಾಂಡ್ ತನ್ನೆಲ್ಲಾ ವಿಕೆಟ್‌ಗಳನ್ನ ಕಳೆದುಕೊಂಡು ಕೇವಲ 166 ರನ್ ಗಳಿಸಲಷ್ಟೇ ಶಕ್ತವಾಯ್ತು. 250 ರನ್‌ಗಳ ಮುನ್ನಡೆ ಸಾಧಿಸಿದ 2ನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 6 ವಿಕೆಟ್ 167 ರನ್ಗಳಿಸಿದೆ.
ಬ್ರಾಡ್ಮನ್ ದಾಖಲೆ ಮುರಿದ ವಾರ್ನರ್:ಇದೇ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 19 ರನ್ ಬಾರಿಸಿದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಡಾನ್ ಬ್ರಾಡ್ಮನ್ ಬಾರಿಸಿದ ರನ್ಗಳನ್ನು ಹಿಂದಿಕ್ಕಿ ದಾಖಲೆ ಬರೆದಿದ್ದಾರೆ.
ಬ್ರಾಡ್ಮನ್ 6996 ರನ್ ಗಳಿಸಿದ್ದರು. ಈಗ 82ನೇ ಟೆಸ್ಟ್ ಪಂದ್ಯದ 151ನೇ ಇನ್ನಿಂಗ್ಸ್‌ನಲ್ಲಿ 48.33ರ ಸರಾಸರಿಯಲ್ಲಿ ವಾರ್ನರ್ 7000 ರನ್ ಗಳಿಸಿದ್ದಾರೆ. ಇದರಲ್ಲಿ 23 ಶತಕ ಹಾಗೂ 13 ಅರ್ಧಶತಕಗಳು ಸೇರಿವೆ. ಈ ಮೂಲಕ ಆಸ್ಟ್ರೇಲಿಯಾದ 5ನೇ ಅತಿ ವೇಗದ ಆಟಗಾರ ಮತ್ತು 7000 ರನ್ ಗಡಿ ದಾಟಿದ 13ನೇ ಆಟಗಾರ ಆಗಿದ್ದಾರೆ.
ಇತ್ತೀಚೆಗಷ್ಟೇ ಸ್ಟಿವ್ ಸ್ಮಿತ್ ದಾಖಲೆಯ 7000 ರನ್‌ಗಳ ಮೈಲುಗಲ್ಲು 126 ಇನ್ನಿಂಗ್ಸ್‌ಗಳಲ್ಲೇ ತಲುಪಿದ್ದರು.