ಕರ್ನಾಟಕ

karnataka

ETV Bharat / sports

ಮೂಲ ನಿವಾಸಿಗಳ ಸಂಸ್ಕೃತಿ-ವರ್ಣಭೇದ ನೀತಿ ವಿರುದ್ಧ ಜಾಗೃತಿಗಾಗಿ ಬರಿಗಾಲಲ್ಲಿ ವೃತ್ತ ರಚಿಸಲಿರುವ ಆಸೀಸ್ ಕ್ರಿಕೆಟಿಗರು

ಕಳೆದ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವೇಳೆ ವರ್ಣಭೇದ ನೀತಿ ವಿರೋಧಿಸಿ ಮೈದಾನದಲ್ಲಿ ಮೊಣಕಾಲೂರುವ ಆಂದೋಲನಕ್ಕೆ ಆಸ್ಟ್ರೇಲಿಯಾ ತಂಡ ಬೆಂಬಬಲ ನೀಡದ್ದಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಮೈಕಲ್ ಹೋಲ್ಡಿಂಗ್ ಟೀಕಿಸಿದ್ದರು.

ಪ್ಯಾಟ್ ಕಮ್ಮಿನ್ಸ್​
ಪ್ಯಾಟ್ ಕಮ್ಮಿನ್ಸ್​

By

Published : Nov 16, 2020, 6:02 PM IST

ಸಿಡ್ನಿ:ಮೂಲ ನಿವಾಸಿಗಳ ಸಂಸ್ಕೃತಿ ಮತ್ತು ಜನಾಂಗಿಯ ನೀತಿ ವಿರೋಧಿಸಿ ಭಾರತದ ವಿರುದ್ಧದ ಪ್ರತಿಯೊಂದು ಸರಣಿಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಆಟಗಾರರು ಬರಿಗಾಲಲ್ಲಿ ವೃತ್ತ ರಚಿಸಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ವೇಗದ ಬೌಲರ್​ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ನಮ್ಮ ತಂಡ ಜನಾಂಗೀಯ ವಿರೋಧಿ ಆಂದೋಲನವನ್ನು ಬೆಂಬಲಿಸಲು ಅಷ್ಟು ಮುಂದಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡದ ಉಪನಾಯಕನಾಗಿರುವ ಕಮ್ಮಿನ್ಸ್, ವರ್ಣಭೇದ ನೀತಿಯ ವಿರುದ್ಧ ಜಾಗೃತಿ ಮೂಡಿಸಲು ತವರಿನಲ್ಲಿ ಮತ್ತು ವಿಶ್ವದಾದ್ಯಂತ ಇದು ಉತ್ತಮ ಮಾರ್ಗ ಎಂದು ಹೇಳಿದ್ದಾರೆ.

ಮೈಕಲ್ ಹೋಲ್ಡಿಂಗ್​

"ನಾವು ಬರಿಗಾಲಿನಿಂದ ವೃತ್ತವನ್ನು ರಚಿಸಲು ನಿರ್ಧರಿಸಿದ್ದೇವೆ. ಪ್ರತಿ ಸರಣಿಯ ಪ್ರಾರಂಭದಲ್ಲಿ ನಾವು ಅದನ್ನು ಮಾಡಲಿದ್ದೇವೆ. ವರ್ಣಭೇದ ನೀತಿ ವಿರುದ್ಧ ಹೋರಾಡಲು ಇದು ಸುಲಭ ಮಾರ್ಗವಾಗಿದೆ. ಕ್ರೀಡೆಯಲ್ಲಿ ಮಾತ್ರವಲ್ಲ ಸಾಮಾನ್ಯ ಜನರಾಗಿಯೂ ನಾವು ವರ್ಣಭೇದ ನೀತಿಯ ವಿರುದ್ಧ ಸಂಪೂರ್ಣವಾಗಿ ಹೋರಾಡಲು ಇರುತ್ತೇವೆ" ಎಂದು ಕಮ್ಮಿನ್ಸ್ ಕ್ರಿಕೆಟ್ ಆಸ್ಟ್ರೇಲಿಯಾದ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವೇಳೆ ವರ್ಣಭೇದ ನೀತಿ ವಿರೋಧಿಸಿ ಮೈದಾನದಲ್ಲಿ ಮೊಣಕಾಲೂರುವ ಆಂದೋಲನಕ್ಕೆ ಆಸ್ಟ್ರೇಲಿಯಾ ತಂಡ ಬೆಂಬಬಲ ನೀಡದ್ದಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಮೈಕಲ್ ಹೋಲ್ಡಿಂಗ್ ಟೀಕಿಸಿದ್ದರು.

ಈ ಹಿಂದೆ ಆಸ್ಟ್ರೇಲಿಯಾ ಮಹಿಳಾ ತಂಡ ಮೊದಲ ಬಾರಿಗೆ ಬರಿಗಾಲಿನ ವೃತ್ತ ರಚಿಸುವ ಆಂದೋಲನಕ್ಕೆ ನಾಂದಿ ಹಾಡಿತ್ತು. ಸೆಪ್ಟೆಂಬರ್​ನಲ್ಲಿ ನಡೆದಿದ್ದ ಕಿವೀಸ್​ ಮಹಿಳೆಯರ ವಿರುದ್ಧದ ಸರಣಿಯಲ್ಲಿ ಎರಡೂ ತಂಡದ ಮಹಿಳಾ ಆಟಗಾರ್ತಿಯರು ಬರಿಗಾಲಿನಲ್ಲಿ ವೃತ್ತ ರಚಿಸಿದ್ದರು.

ABOUT THE AUTHOR

...view details