ಕರ್ನಾಟಕ

karnataka

ETV Bharat / sports

ಮಾನನಷ್ಟ ಕೇಸ್‌ನಲ್ಲಿ ಗೇಲ್‌ಗೆೆ ಗೆಲುವು! ಪರಿಹಾರ ಮೊತ್ತ ಎಷ್ಟು ಗೊತ್ತಾ?

ಆಸ್ಟ್ರೇಲಿಯಾದ ಮಾಧ್ಯಮ ತಮ್ಮ ಕುರಿತು ಅಪಪ್ರಚಾರ ಮಾಡುವ ಮೂಲಕ ತೇಜೋವಧೆ ಮಾಡಿದೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಗೇಲ್‌ಗೆ ಮತ್ತೆ ಗೆಲುವಾಗಿದೆ.

Australian

By

Published : Jul 16, 2019, 1:30 PM IST

Updated : Jul 16, 2019, 1:36 PM IST

ನ್ಯೂಸೌತ್​ವೇಲ್ಸ್​: ಆಸ್ಟ್ರೇಲಿಯಾದ ಮಾಧ್ಯಮ ತಮ್ಮ ಕುರಿತು ಅಪಪ್ರಚಾರ ಮಾಡುವ ಮೂಲಕ ತೇಜೋವಧೆ ಮಾಡಿದೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ವೆಸ್ಟ್‌ ಇಂಡೀಸ್ ಕ್ರಿಕೆಟ್‌ ದೈತ್ಯ ಕ್ರಿಸ್‌ ಗೇಲ್‌ಗೆ ಜಯ ಸಿಕ್ಕಿದೆ.

2015ರ ವಿಶ್ವಕಪ್​ ವೇಳೆ ಗೇಲ್​ ಮಸಾಜ್​ ಸೆಂಟರ್​ ಮಹಿಳಾ ಸಿಬ್ಬಂದಿಯೊಂದಿಗೆ ಅಶ್ಲೀಲವಾಗಿ ಸಂಭಾಷಣೆ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಈ ಬಗ್ಗೆ ಆಸ್ಟ್ರೇಲಿಯಾದ ಫೈರ್​ಫ್ಯಾಕ್ಸ್​ ಮೀಡಿಯಾ ಗ್ರೂಫ್​ನ ಪತ್ರಿಕೆಗಳಾದ ದಿ ಸಿಡ್ನಿ ಮಾರ್ನಿಂಗ್​ ಹೆರಾಲ್ಡ್​ ಹಾಗೂ ದಿ ಏಜ್​ ಗೇಲ್​ ವಿರುದ್ಧ ಸರಣಿ ಲೇಖನಗಳನ್ನು ಪ್ರಕಟಿಸಿದ್ದವು.

ಈ ಪತ್ರಿಕೆಗಳು ತಮ್ಮ ತೇಜೋವಧೆ ಮಾಡಿವೆಯೆಂದು ಆರೋಪಿಸಿ ಕ್ರಿಸ್ ಗೇಲ್‌ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್​ ಗೇಲ್​​ ವಿರುದ್ಧ ಸಾಕ್ಷ್ಯಗಳನ್ನು ಒದಗಿಸುವಲ್ಲಿ ವಿಫಲವಾದ ಫೈರ್​ಫ್ಯಾಕ್ಸ್​ ಮೀಡಿಯಾಗೆ 3 ಲಕ್ಷ ಆಸ್ಟ್ರೇಲಿಯಾ ಡಾಲರ್​ ಹಣವನ್ನು ಮಾನನಷ್ಟ ಪರಿಹಾರ ರೂಪದಲ್ಲಿ ನೀಡಬೇಕೆಂದು ತೀರ್ಪು ನೀಡಿತ್ತು.

ಈ ತೀರ್ಪಿನ ವಿರುದ್ಧ ಫೈರ್​ಫ್ಯಾಕ್ಸ್ ಮೀಡಿಯಾ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು. ಗೇಲ್​ ಕೂಡ ಹೆಚ್ಚಿನ ಪರಿಹಾರ ಮೊತ್ತಕ್ಕಾಗಿ ಮೇಲ್ಮನವಿ ಸಲ್ಲಿಸಿದ್ದರು. ಎರಡನೇ ಬಾರಿಯೂ ಫೈರ್‌ಫಾಕ್ಸ್ ಮೀಡಿಯಾ ಗೇಲ್​ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಒದಗಿಸುವಲ್ಲಿ ವಿಫಲವಾಗಿದ್ದು ಮೇಲ್ಮನವಿ ವಜಾಗೊಳಿಸಿದೆ. ಜೊತೆಗೆ ಗೇಲ್​ ಸಲ್ಲಿಸಿದ್ದ ಅರ್ಜಿಯನ್ನೂ ವಜಾ ಮಾಡಿದೆ.

ಹಳೆಯ ತೀರ್ಪಿನಂತೆ ಗೇಲ್​ 3 ಲಕ್ಷ ಆಸ್ಟ್ರೇಲಿಯನ್ ಡಾಲರ್ (1.5 ಕೋಟಿ ರೂ)​ ಮೊತ್ತವನ್ನು ಮಾನನಷ್ಟವಾಗಿ ಫೈರ್​ಫ್ಯಾಕ್ಸ್​ ಮಾಧ್ಯಮ ಸಂಸ್ಥೆಯಿಂದ ಪಡೆಯಲಿದ್ದಾರೆ.

Last Updated : Jul 16, 2019, 1:36 PM IST

ABOUT THE AUTHOR

...view details