ಕರ್ನಾಟಕ

karnataka

ETV Bharat / sports

ಭಾರತ ವಿರುದ್ಧದ ಟಿ20 ಸರಣಿಗೆ ವಿಶೇಷ ಜರ್ಸಿ ಬಿಡಿಗಡೆ ಮಾಡಿದ ಆಸ್ಟ್ರೇಲಿಯಾ - ಕ್ರಿಕೆಟ್ ಆಸ್ಟ್ರೇಲಿಯಾ

ಈ ಹೊಸ ಜೆರ್ಸಿಯನ್ನು ಆಸ್ಟ್ರೇಲಿಯಾ ಪರವಾಗಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಮೊದಲು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸಿದ್ದಾರೆ. ಹೊಸ ಜೆರ್ಸಿಯಲ್ಲಿ ಭಾರತದ ವಿರುದ್ಧ ಆಡಲು ಉತ್ಸುಕನಾಗಿದ್ದೇನೆ..

ಭಾರತ ಆಸ್ಟ್ರೇಲಿಯಾ 20 ಸರಣಿ
ವಿಶೇಷ ಜರ್ಸಿಯಲ್ಲಿ ಸ್ಟಾರ್ಕ್​

By

Published : Nov 11, 2020, 6:32 PM IST

ಮೆಲ್ಬೋರ್ನ್​: ಭಾರತ ತಂಡದ ವಿರುದ್ಧ ಮುಂಬರುವ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು ಸ್ಥಳೀಯವಾಗಿ ಡಿಸೈನ್ ಮಾಡಿರುವ ಜರ್ಸಿಗಳನ್ನು ತೊಟ್ಟು ಆಡಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವ ಉದ್ಧೇಶವನ್ನು ಕ್ರಿಕೆಟ್​ ಆಸ್ಟ್ರೇಲಿಯಾ ಹೊಂದಿರುವುದಾಗಿ ತಿಳಿದು ಬಂದಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ಈ ಹೊಸದಾಗಿ ಡಿಸೈನ್​ ಆಗಿರುವ ಜರ್ಸಿಯನ್ನು ಅನಾವರಣಗೊಳಿಸಿದೆ. ಈ ವಿಶೇಷ ಜರ್ಸಿಯನ್ನು ಎಎಸ್‌ಐಸಿಎಸ್(ASICS) ಕ್ರೀಡಾ ವಸ್ತುಗಳ ತಯಾರಿಕಾ ಸಂಸ್ಥೆ ಮತ್ತು ಆಂಟಿ ಫಿಯೋನಾ ಕ್ಲಾರ್ಕ್ ಮತ್ತು ಕರ್ಟ್ನಿ ಹ್ಯಾಗನ್ ಎಂಬ ಇಬ್ಬರು ಸ್ಥಳೀಯ ಮಹಿಳೆಯರ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೆಲಿಯಾ ತಿಳಿಸಿದೆ.

ಈ ಹೊಸ ಜೆರ್ಸಿಯನ್ನು ಆಸ್ಟ್ರೇಲಿಯಾ ಪರವಾಗಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಮೊದಲು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸಿದ್ದಾರೆ. ಹೊಸ ಜೆರ್ಸಿಯಲ್ಲಿ ಭಾರತದ ವಿರುದ್ಧ ಆಡಲು ಉತ್ಸುಕನಾಗಿದ್ದೇನೆ ಎಂದು ಸ್ಟಾರ್ಕ್​ ಹೇಳಿದ್ದಾರೆ.

ಈ ವಿನ್ಯಾಸ ಪೂರ್ವ ಕ್ರಿಕೆಟಿಗರು, ಪ್ರಸ್ತುತ ಮತ್ತು ಭವಿಷ್ಯದ ಮೂಲಕ ನಿವಾಸಿ ಕ್ರಿಕೆಟಿಗರ ಸಂಕೇತವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಈಗಾಗಲೇ ಆಸ್ಟ್ರೇಲಿಯಾ ಮಹಿಳೆಯರ ತಂಡ ಇಂಗ್ಲೆಂಡ್​ ವಿರುದ್ದ ಈ ವರ್ಷಾರಂಭದಲ್ಲಿ ಇದೇ ವಿನ್ಯಾಸದ ಜೆರ್ಸಿಯಲ್ಲಿ ಆಡಿತ್ತು.

ಭಾರತದ ವಿರುದ್ಧ ಆಸ್ಟ್ರೇಲಿಯಾ 3 ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಿದೆ. ನಂತರ 4 ಟೆಸ್ಟ್​ ಪಂದ್ಯಗಳ ಸರಣಿ ನಡೆಯಲಿದೆ.

ABOUT THE AUTHOR

...view details