ಮೆಲ್ಬೋರ್ನ್: ಆಸ್ಟ್ರೇಲಿಯಾಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟಿರುವ ನಾಯಕ ರಿಕಿ ಪಾಂಟಿಂಗ್ ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಅತ್ಯಂತ ಕಠಿಣ ಬೌಲಿಂಗ್ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಸಂಸ್ಥೆ 2005ರ ಆ್ಯಶಸ್ ಟೆಸ್ಟ್ ಸೆರಣಿಯ ಒಂದು ವಿಡಿಯೋವನ್ನು ಶೇರ್ ಮಾಡಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ 2 ರನ್ಗಳ ರೋಚಕ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ರಿಕಿಪಾಂಟಿಂಗ್ ಅವರನ್ನು ಆ್ಯಂಡ್ರ್ಯೂ ಫ್ಲಿಂಟಾಫ್ ಔಟ್ ಮಾಡಿದ್ದ ಒಂದು ವಿಡಿಯೋವನ್ನು ಶೇರ್ ಮಾಡಿಕೊಂಡಿತ್ತು ಶೇರ್ ಮಾಡಿಕೊಂಡಿತ್ತು.
ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಪಾಂಟಿಂಗ್ ನಾನು ಎದುರಿಸಿದ ಅತ್ಯಂತ ಕಠಿಣ ಓವರ್, ಗಂಟೆಗೆ 90 ಮೈಲಿ ವೇಗದಲ್ಲಿ ಕ್ಲಾಸ್ ರಿವರ್ಸ್ಸ್ವಿಂಗ್ ಆಗಿತ್ತಿ ಎಂದು ಫ್ಲಿಂಟಾಫ್ ಬೌಲಿಂಗ್ ಅನ್ನು ಮೆಚ್ಚಿದ್ದಾರೆ.
ಆ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 407 ರನ್ಗಳಿಸಿತ್ತು, ಇದಕ್ಕುತ್ತರವಾಗಿ ಆಸ್ಟ್ರೇಲಿಯಾ 308 ರನ್ಗಳಿಸಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಕೇವಲ 182 ರನ್ಗಳಿಗೆ ಆಲೌಟ್ ಆಗಿತ್ತು.
282 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ 220ಕ್ಕೆ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿತ್ತು. ಆದರೆ ಯುವ ಬ್ಯಾಟ್ಸ್ಮನ್ ಬ್ರೆಟ್ಲೀ ಹಾಗೂ ಮೈಕಲ್ ಕ್ಯಾಸ್ಟ್ರೊವಿಚ್ ಅರ್ಧಶತಕ ಸಿಡಿಸಿ ಗೆಲುವಿನ ಸನಿಹ ತಂದಿದ್ದರು. ಆದರೆ ಕ್ಯಾಸ್ಟ್ರೊವಿಚ್ ಗೆಲವಿಗೆ 3 ರನ್ಗಳ ಆಗತ್ಯವಿದ್ದಾಗ ಫ್ಲಿಂಟಾಫ್ ಓವರ್ನಲ್ಲಿ ಔಟಾಗುವ ಮೂಲಕ 2 ರನ್ಗಳ ರೋಚಕ ಸೋಲು ಕಂಡಿತ್ತು. ಈ ಪಂದ್ಯ ಆ್ಯಶಸ್ ಇತಿಹಾಸದಲ್ಲಿ ಅತ್ಯುತ್ತಮ ಪಂದ್ಯ ಎಂದು ಖ್ಯಾತಿ ಪಡೆದಿದೆ.