ಹೈದರಾಬಾದ್: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ-ಪಾಕಿಸ್ತಾನದಂತೆ ಆಸ್ಟ್ರೇಲಿಯಾ- ಇಂಗ್ಲೆಂಡ್ ತಂಡಗಳು ಬದ್ಧ ವೈರಿಗಳಿದ್ದಂತೆ. ಹೀಗಾಗಿ ಉಭಯ ತಂಡದ ಅಭಿಮಾನಿಗಳು ಪ್ರತಿ ಪಂದ್ಯ ಮುಗಿದ ನಂತರ ಒಬ್ಬರನ್ನೊಬ್ಬರು ಕಾಲೆಳೆಯುವುದು ಸಹಜ. ಅಂತಾ ಸಾಲಿಗೆ ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್ ಕೂಡ ಸೇರ್ಪಡೆಗೊಂಡಿದೆ.
ಮ್ಯಾಂಚೆಸ್ಟರ್ನಲ್ಲಿ ನಡೆದ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ 185 ರನ್ಗಳ ಅಂತರದಲ್ಲಿ ಗೆಲುವು ಸಾಧಿಸಿ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಆಸೀಸ್ ವಿರುದ್ಧ ಆಂಗ್ಲರು ಹಿನಾಯ ಸೋಲು ಕಂಡಿದ್ದು, ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್ ಸರಣಿ ಟ್ವೀಟ್ಗಳ ಮೂಲಕ ಇಂಗ್ಲೆಂಡ್ ತಂಡವನ್ನ ಸಖತ್ ಟ್ರೋಲ್ ಮಾಡಿದೆ.
'ಇಂಗ್ಲೆಂಡ್‌ನಲ್ಲಿ ಆಸೀಸ್ ಮತ್ತು ಕಿವೀಸ್ ಅವರನ್ನು ಗುರಿಯಾಗಿಸಿಕೊಂಡು ಸರಣಿ ದರೋಡೆಗಳಲ್ಲಿ ಭಾಗಿಯಾಗಿರುವ ಗ್ಯಾಂಗ್‌ನ ಚಟುವಟಿಕೆಗಳನ್ನು ಮ್ಯಾಂಚೆಸ್ಟರ್‌ನಲ್ಲಿರುವ ಆಸ್ಟ್ರೇಲಿಯನ್ನರ ಗುಂಪು ವಿಫಲಗೊಳಿಸಿದೆ ಎಂಬ ವರದಿಗಳನ್ನು ನೋಡುತ್ತಿರುವುದು ಸಂತೋಷದ ವಿಚಾರ. ಎಂದು ಟ್ವೀಟ್ ಮಾಡಿದೆ.
ಅಲ್ಲದೆ 'ಈ ಗ್ಯಾಂಗ್ ಈ ಹಿಂದೆ ಲಂಡನ್ನಲ್ಲಿ ನಮ್ಮ ನೆರೆಯ ನ್ಯೂಜಿಲ್ಯಾಂಡ್ ಅವರ ಕೈಯಿಂದ ಒಂದು ಅಮೂಲ್ಯವಾದ ಕಪ್ ಕಿತ್ತುಕೊಂಡಿತ್ತು. ನಂತರ ಅವರ ಕೆಂಪು-ತಲೆಯ ಸದಸ್ಯರೊಬ್ಬರು ಹೆಡಿಂಗ್ಲೆಯಲ್ಲಿ ಪುರಾತನ ಚಿತಾಭಸ್ಮವನ್ನು ಅದರ ಮಾಲೀಕರಿಂದ ಪಡೆದುಕೊಳ್ಳಲು ಕುಸ್ತಿಯಾಡಿದ್ದರು' ಎಂದು ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಗೆಲುವಿಗೆ ಕಾರಣರಾಗಿದ್ದ ಬೆನ್ಸ್ಟೋಕ್ಸ್ ಕಾಲೆಳೆದಿದೆ.
ಸಂತೋಷದ ವಿಷಯವೇನೆಂದರೆ ಆ ಚಿತಾಭಸ್ಮ ಎಲ್ಲಿಗೆ ಸೇರಬೇಕೊ ಅಲ್ಲಿಗೆ ಸೇರಿದೆ ಎಂದು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸೋಲುಕಂಡ ಇಂಗ್ಲೆಂಡ್ ತಂಡದ ಕಾಲೆಳೆದಿದೆ.