ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಲೋಕವನ್ನೇ ಬೆಚ್ಚಿ ಬೀಳಿಸಿದ್ದ ಆ ಕ್ರಿಕೆಟಿಗನ ದುರಂತ ಸಾವಿಗೆ 5 ವರ್ಷ - ಫಿಲಿಪ್​ ಹ್ಯೂಸ್- ಸೀನ್​ ಅಬಾಟ್​

ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಕಾಯಂ ಸದಸ್ಯನಾಗಿದ್ದ ಫಿಲಿಪ್​ ಹ್ಯೂಸ್ ನವೆಂಬರ್​ 27 2014ರಲ್ಲಿ​ ಶೈಪಲ್ಡ್​ ಶೀಲ್ಡ್ ಟೂರ್ನಿಯಲ್ಲಿ  ಆಡುವ ವೇಳೆ ಸೀನ್​ ಅಬಾಟ್​ ಎಸೆದ ಬೌನ್ಸರ್​ ತಲೆಯ ಹಿಂಭಾಗಕ್ಕೆ ಬಡಿಸ ಪರಿಣಾಮ ಹ್ಯೂಸ್​ ​ಗಂಭೀರ ಗಾಯಗೊಂಡು ಮೃತಪಟ್ಟಿದ್ದರು.

Philip Hughes  5th death anniversary!
Philip Hughes 5th death anniversary!

By

Published : Nov 27, 2019, 1:42 PM IST

ಹೈದರಾಬಾದ್​: ಆಸ್ಟ್ರೇಲಿಯಾದ ಪ್ರತಿಭಾವಂತ ಕ್ರಿಕೆಟಿಗ ಫಿಲಿಪ್ ಹ್ಯೂಸ್​ ಮೈದಾನದಲ್ಲೇ ಸಾವನ್ನಪ್ಪಿ ಇಂದಿಗೆ 5 ವರ್ಷ ತುಂಬಿದೆ.

ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಕಾಯಂ ಸದಸ್ಯನಾಗಿದ್ದ ಫಿಲಿಪ್​ ಹ್ಯೂಸ್ ನವೆಂಬರ್​ 27 2014ರಲ್ಲಿ​ ಶೈಪಲ್ಡ್​ ಶೀಲ್ಡ್ ಟೂರ್ನಿಯಲ್ಲಿ ಆಡುವ ವೇಳೆ ಸೀನ್​ ಅಬಾಟ್​ ಎಸೆದ ಬೌನ್ಸರ್​ ತಲೆಯ ಹಿಂಭಾಗಕ್ಕೆ ಬಡಿಸ ಪರಿಣಾಮ ಹ್ಯೂಸ್​ ​ಗಂಭೀರ ಗಾಯಗೊಂಡು ಮೃತಪಟ್ಟಿದ್ದರು.

ಇಂದಿಗೆ ಹ್ಯೂಸ್​ ಮೃತಪಟ್ಟು 5 ವರ್ಷ ತುಂಬಿದ್ದು, ಹ್ಯೂಸ್​ಗೆ ಆಸ್ಟ್ರೇಲಿಯಾ ಕ್ರಿಕೆಟಿಗರು, ಕ್ರಿಕೆಟ್​ ಆಸ್ಟ್ರೇಲಿಯಾ ಸಂಸ್ಥೆ ಹಅಗೂ ಸಹ ಆಟಗಾರ ಸ್ಟೀವ್​​ ಸ್ಮಿತ್​ ಸೇರಿದಂತೆ ಹಲವಾರು ಕ್ರಿಕೆಟಿಗರು ಸಾಮಾಜಿಕ ಜಾಲಾತಾಣದಲ್ಲಿ ಮರುಕ ವ್ಯಕ್ತಪಡಿಸಿದ್ದಾರೆ.

ಕೇವಲ 25 ವರ್ಷಕ್ಕೆ ದಾರುಣ ಸಾವು ಕಂಡ ಪ್ರತಿಭಾವಂತ ಬ್ಯಾಟ್ಸ್​ಮನ್​ ಹ್ಯೂಸ್​ ಆಸ್ಟ್ರೇಲಿಯಾ ಪರ 25 ಟೆಸ್ಟ್​ ಹಾಗೂ 24 ಏಕದಿನ ಪಂದ್ಯಗಳನ್ನಾಡಿದ್ದರು.

ಆಸ್ಟ್ರೇಲಿಯಾದ ಮಾಜಿ ನಾಯಕನಾದ ಸ್ಟೀವ್​​ ಸ್ಮಿತ್​ ತಮ್ಮೊಂದಿಗೆ ಹ್ಯೂಸ್​ ಇರುವ ಫೋಟೋ ಶೇರ್​ ಮಾಡಿಕೊಂಡು 'ಮಿಸ್​ ಯು ಬ್ರದರ್​ #408 ' ಎಂದು ತಮ್ಮ ಇನ್ಸ್ಟಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಪ್ರತಿ ದಿನ ನಿನ್ನ ಬಗ್ಗೆ ಆಲೋಚಿಸುತ್ತೇನೆ, ಆದರೆ ಈ ಹೆಚ್ಚು ಹೆಚ್ಚಾಗಿದೆ ಎಂದು ಮೈಕಲ್​ ಕ್ಲಾರ್ಕ್​ ಕೂಡ ಹ್ಯೂಸ್​ರನ್ನು ನೆನೆದುಕೊಂಡಿದ್ದಾರೆ.

ಫಿಲಿಫ್ ಹ್ಯೂಸ್​ ದುರಂತ ಸಾವಿನ ನಂತರ ಕ್ರಿಕೆಟ್​ ಮೈದಾನದಲ್ಲಿ ಇಂತಹ ಘಟನೆ ಮರುಕಳಿಸಬಾರದೆಂದು ಕ್ರಿಕೆಟ್​ ಆಸ್ಟ್ರೇಲಿಯಾ, ಅತ್ಯುತ್ತಮ ಹೆಲ್ಮೆಟ್​, ನೆಕ್​ ಗಾರ್ಡ್​ಗಳನ್ನು ಕಡ್ಡಾಯಗೊಳಿಸಿದೆ. ಐಸಿಸಿ ಕೂಡ ಹೆಲ್ಮೆಟ್​ಗೆ ಬಾಲ್​ ತಗುಲಿದರೆ ಆತನ ಬದಲಾಗಿ ಮತ್ತೊಬ್ಬ ಆಟಗಾರಿಗೆ ಬ್ಯಾಟಿಂಗ್​ ನಡೆಸಲು ಅವಕಾಶ ನೀಡಿ ಹೊಸ ನಿಯಮವನ್ನೇ ಜಾರಿಗೆ ತಂದಿದೆ.

ABOUT THE AUTHOR

...view details