ನಾಟಿಂಗ್ಹ್ಯಾಮ್:ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಆಸೀಸ್ ಬಾಂಗ್ಲಾದೇಶದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.
ಆಸ್ಟ್ರೇಲಿಯ ಈ ಪಂದ್ಯದಲ್ಲಿ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿದ್ದರೆ ಬಾಂಗ್ಲದೇಶ 2 ಬದಲಾವಣೆ ಮಾಡಿಕೊಂಡಿದೆ.
ಆಸ್ಟ್ರೇಲಿಯಾಕ್ಕೆ ನಥನ್ ಕೌಲ್ಟರ್ನೈಲ್, ಜಂಪಾ ಹಾಗೂ ಸ್ಟೋಯ್ನಿಸ್ ತಂಡಕ್ಕೆ ಸೇರಿಕೊಂಡಿದ್ದಾರೆ. ಶಾನ್ ಮಾರ್ಶ್, ಕೇನ್ ರಿಚರ್ಡ್ಸ್ನ್ ಹಾಗೂ ಬೆಹ್ರನ್ ಡ್ರಾಫ್ ತಂಡದಿಂದ ಹೊರ ನಡೆದಿದ್ದಾರೆ.
ಬಾಂಗ್ಲಾದೇಶ ತಂಡಕ್ಕೆ ಸೈಫುದ್ದೀನ್ ಬದಲು ರುಬೆಲ್ ಹಸನ್,ಮೊಸದಿಕ್ ಹಸನ್ ಬದಲು ಸಬ್ಬೀರ್ ರಹಮಾನ್ ಅವಕಾಶ ಪಡೆದಿದ್ದಾರೆ.