ಸಿಡ್ನಿ(ಆಸ್ಟ್ರೇಲಿಯಾ):ವಿಶ್ವಕಪ್ ಟಿ-ಟ್ವೆಂಟಿ ಮಹಿಳೆಯರ ಕದನದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 5 ರನ್ಗಳಿಂದ ಮಣಿಸಿದ ಆಸ್ಟ್ರೇಲಿಯಾ ಪ್ರಶಸ್ತಿ ಸುತ್ತಿಗೆ ಅರ್ಹತೆ ಗಿಟ್ಟಿಸಿದೆ. ಭಾನುವಾರ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಮಳೆರಾಯನ ಆಗಮನವಾದ ಕಾರಣ ಪಂದ್ಯಕ್ಕೆ ಡಕ್ವರ್ಥ್ ಲೂಯಿಸ್ ನಿಯಮ ಅನ್ವಯಿಸಲಾಯಿತು. ಈ ನಿಯಮದನ್ವಯ 13 ಓವರ್ಗಳಲ್ಲಿ 98 ರನ್ಗಳ ಗುರಿ ಪಡೆದಿದ್ದ ದ. ಆಫ್ರಿಕಾ ನಿಗದಿತ ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 92 ರನ್ಗಳಿಸಷ್ಟೇ ಶಕ್ತವಾಗಿ 5 ರನ್ಗಳ ಸೋಲೊಪ್ಪಿಕೊಂಡಿತು.
ಇದಕ್ಕೂ ಮೊದಲು ಟಾಸ್ ಗೆದ್ದ ದ.ಆಫ್ರಿಕಾ ಮಹಿಳೆಯರು ಆಸೀಸ್ ಮಹಿಳೆಯರನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಅದರಂತೆ ಆಸ್ಟ್ರೇಲಿಯಾ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿತ್ತು. ನಾಯಕಿ ಲಾನಿಂಗ್ 49 ರನ್, ಬೆತ್ ಮೂನಿ 28, ಅಲಿಸಾ ಹೀಲಿ 18 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ದಕ್ಷಿಣ ಆಫ್ರಿಕಾ ಪರ ನಡಿನ್ ದಿ ಕ್ಲರ್ಕ್ 3 ವಿಕೆಟ್ ಪಡೆದು ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆ ಹಾಕದಂತೆ ತಡೆದರು. ಅಯಬೊಂಗ ಖಾಕಾ ಹಾಗೂ ನೊಕುಲುಲೆಕೊ ಮ್ಲಾಬಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಆದರೆ, ಮೊದಲ ಇನ್ನಿಂಗ್ಸ್ ಮುಗಿದ ನಂತರ ಮಳೆ ಬಂದಿದ್ದರಿಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಡಕ್ವರ್ಥ್ ನಿಯಮದ ಪ್ರಕಾರ, 13 ಓವರ್ಗಳಲ್ಲಿ 98 ರನ್ಗಳ ಟಾರ್ಗೆಟ್ ನೀಡಲಾಯ್ತು.