ಕರ್ನಾಟಕ

karnataka

ETV Bharat / sports

ಮಹಿಳಾ ಟಿ-20 ವಿಶ್ವಕಪ್​: ಬಾಂಗ್ಲಾದೇಶದ ವಿರುದ್ಧ ಆಸ್ಟ್ರೇಲಿಯಾಕ್ಕೆ 86 ರನ್​ಗಳ ಜಯ - ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ 86 ರನ್​ಗಳ ಜಯ

ಟಿ-20 ವಿಶ್ವಕಪ್​ನ 10 ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್​ ನಡೆಸಿ 189 ರನ್​ಗಳ ಬೃಹತ್​ ಮೊತ್ತ ಕಲೆಹಾಕಿತು. ಇದು ವಿಶ್ವಕಪ್​ನಲ್ಲಿ ದಾಖಲಾದ ಮೂರನೇ ಗರಿಷ್ಠ ಮೊತ್ತವಾಯಿತು.

ಮಹಿಳಾ ಟಿ20 ವಿಶ್ವಕಪ್
ಮಹಿಳಾ ಟಿ20 ವಿಶ್ವಕಪ್

By

Published : Feb 27, 2020, 5:59 PM IST

ಮೇಲ್ಬೋರ್ನ್​: ಉದ್ಘಾಟನಾ ಪಂದ್ಯದ ಸೋಲಿನ ನಂತರ ಮತ್ತೆ ಚಾಂಪಿಯನ್​ ಆಟಕ್ಕೆ ಮರಳಿರುವ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ತಂಡ ವಿಶ್ವಕಪ್​ನಲ್ಲಿ ಬಾಂಗ್ಲಾದೇಶವನ್ನು 86 ರನ್​ಗಳಿಂದ ಮಣಿಸುವ ಮೂಲಕ ಸತತ ಎರಡನೇ ಜಯ ಸಾಧಿಸಿದೆ.

ಟಿ-20 ವಿಶ್ವಕಪ್​ನ 10 ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್​ ನಡೆಸಿ 189 ರನ್​ಗಳ ಬೃಹತ್​ ಮೊತ್ತ ಕಲೆಹಾಕಿತು. ಇದು ವಿಶ್ವಕಪ್​ನಲ್ಲಿ ದಾಖಲಾದ ಮೂರನೇ ಗರಿಷ್ಠ ಮೊತ್ತವಾಯಿತು.

ಆರಂಭಿಕ ಬ್ಯಾಟ್ಸ್​ವುಮನ್​ ಅಲಿಸ್ಸಾ ಹೀಲಿ 83 ಹಾಗೂ ಬೆತ್​ ಮೂನಿ 81 ರನ್​ಗಳಿಸಿದರು ಈ ಜೋಡಿ ಮೊದಲ ವಿಕೆಟ್​ಗೆ ದಾಖಲೆಯ 151 ರನ್​ಗಳಿಸಿತು. ಹೀಲಿ 53 ಎಸೆತಗಳಲ್ಲಿ 3 ಸಿಕ್ಸರ್ಸ್​ ಹಾಗೂ 10 ಬೌಂಡರಿ ಸಹಿತ 83 ರನ್​ಗಳಿಸಿದರೆ, ಮೂನಿ 58 ಎಸೆತಗಳಲ್ಲಿ 9 ಬೌಂಡರಿ ಸಹಿತ 81 ರನ್​ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಗಾರ್ಡ್ನರ್​ 9 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್​​ ಸಹಿತ 22 ರನ್​ಗಳಿಸಿತು.

ಇನ್ನು 190 ರನ್​ಗಳ ಬೃಹತ್​ ಮೊತ್ತ ಬೆನ್ನತ್ತಿದ ಬಾಂಗ್ಲಾ ಮಹಿಳಾ ತಂಡ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 103 ರನ್​ಗಳಿಸಲಷ್ಟೇ ಶಕ್ತವಾಯಿತು. ಫರಾನಾ ಹಕ್ 36 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಆಸ್ಟ್ರೇಲಿಯಾ ಪರ ಮೆಗನ್​ ಶೂಟ್ 3 ವಿಕೆಟ್​, ಜೆಸ್​ ಜೊನ್ನಾಸೆನ್​ 2, ಆ್ಯನ್ನಾಬೆಲ್ ಸದರ್ಲೆಂಡ್​ ಹಾಗೂ ನಿಕೋಲಸ್​ ಕ್ಯಾರಿ ತಲಾ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ​

83 ರನ್​ಗಳಿಸಿದ ಅಲಿಸ್ಸಾ ಹೀಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆಸ್ಟ್ರೇಲಿಯಾ ತಂಡ ತನ್ನ ಮುಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಫೈನಲ್​ ಪ್ರವೇಶಿಸಲಿದೆ.

ABOUT THE AUTHOR

...view details