ಅಡಿಲೇಡ್:ಆ್ಯಶಸ್ ಸರಣಿಯಲ್ಲಿ ರನ್ ಬರ ಎದುರಿಸಿದ್ದ ಆಸೀಸ್ ಆರಂಭಿಕ ಬ್ಯಾಟ್ಸ್ಮನ್ ವಾರ್ನರ್ ತ್ರಿಶತಕ ಸಿಡಿಸಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದ ವಾರ್ನರ್ ಎರಡನೇ ಪಂದ್ಯದಲ್ಲೂ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ್ದು ಆಕರ್ಷಕ ತ್ರಿಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದಿದ್ದ ವಾರ್ನರ್ 391 ಎಸೆತಗಳಲ್ಲಿ 37 ಬೌಂಡರಿ ಸಹಿತ 300 ರನ್ಗಳಿಸಿ ಔಟಾಗದೆ ಉಳಿದಿದ್ದಾರೆ. ವಾರ್ನರ್ ಅವರ ತ್ರಿಶತಕದ ನೆರವಿನಿಂದ ಆಸ್ಟ್ರೇಲಿಯಾ 537 ರನ್ಗಳಿಸಿ ಇನ್ನಿಂಗ್ಸ್ ಮುಂದುವರಿಸಿದೆ.
ವಾರ್ನರ್ಗೆ ಸಾಥ್ ನೀಡಿದ ಮಾರ್ನಸ್ ಲ್ಯಾಬುಶೇನ್ 162 ರನ್ಹಾಗೂ ಸ್ಮಿತ್ 36 ರನ್ಗಳಿಸಿ ಔಟಾದರು. ಪಾಕಿಸ್ತಾನ ಪರ ಆಸೀಸ್ನ 3 ವಿಕೆಟ್ ಶಹೀನ್ ಅಫ್ರಿದಿ ಪಾಲಾದವು.
ಡೇವಿಡ್ ವಾರ್ನರ್ ಆಸ್ಟ್ರೇಲಿಯಾದ ಪರ 7ನೇ ತ್ರಿಶತಕ, ಆಸ್ಟ್ರೇಲಿಯಾ ನೆಲದಲ್ಲಿ 4ನೇ ತ್ರಿಶತಕ, ಪಾಕಿಸ್ತಾನ ವಿರುದ್ಧ ತ್ರಿಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಅಲ್ಲದ ಅಡಿಲೇಡ್ ಮೈದಾನದಲ್ಲಿ ಶತಕ ಸಿಡಿಸಿದ ಏಕೈಕ ಬ್ಯಾಟ್ಸ್ಮನ್ ಎನಿಸಿಕೊಂಡರು.
ಆಸ್ಟ್ರೇಲಿಯಾ ಪರ ಡಾನ್ ಬ್ರಾಡ್ಮನ್(2ಬಾರಿ), ಬಾಬ್ ಸಿಂಪ್ಸನ್, ಬಾಬ್ ಕೌಪರ್, ಮಾರ್ಕ್ ಟೇಲರ್, ಮ್ಯಾಥ್ಯೂ ಹೇಡನ್, ಮೈಕಲ್ ಕ್ಲಾರ್ಕ್ ಈ ಮೊದಲು ಟೆಸ್ಟ್ನಲ್ಲಿ ತ್ರಿಶತಕ ಸಿಡಿಸಿದ್ದಾರೆ.