ನವದೆಹಲಿ:2ನೇ ಟೆಸ್ಟ್ನಲ್ಲಿ ಗಾಯಗೊಂಡಿರುವ ಭಾರತ ತಂಡದ ವೇಗಿ ಉಮೇಶ್ ಯಾದವ್ ಬದಲಿಗೆ ಎಡಗೈ ವೇಗಿ ಶಾರ್ದುಲ್ ಠಾಕೂರ್ ಅವರಿಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅವಕಾಶ ನೀಡುವ ಸಾದ್ಯತೆಯಿದೆ.
ಮೂಲಗಳ ಪ್ರಕಾರ ಅನುಭವಿ ವೇಗಿ ಸ್ನಾಯು ಸೆಳತೆಕ್ಕೆ ಒಳಗಾಗಿ ಕೊನೆಯ ಎರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಅವರು ಈಗಾಗಲೇ ಭಾರತಕ್ಕೆ ಮರಳಿದ್ದು, ಪುನಶ್ಚೇತನಕ್ಕಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
"ಟಿ.ನಟರಾಜನ್ ಬಗ್ಗೆ ಹೆಚ್ಚಿನ ಜನರು ಉತ್ಸಾಹ ತೋರುತ್ತಿದ್ದಾರೆ. ಆದರೆ, ಅವರು ತಮಿಳುನಾಡು ಪರ ಕೇವಲ ಒಂದೇ ಒಂದು ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ ಎಂಬುದನ್ನು ನಾವು ಮರೆಯಬಾರದು. ಮತ್ತೆ ಶಾರ್ದುಲ್ ಠಾಕೂರ್ ಮುಂಬೈ ಪರ ಪ್ರಮುಖ ರೆಡ್ ಬಾಲ್ ಬೌಲರ್ ಆಗಿದ್ದಾರೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ನ್ಯೂಸ್ ಎಜೆನ್ಸಿಗೆ ಮಾಹಿತಿ ನೀಡಿದ್ದಾರೆ.