ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟ ತಲುಪಿದ್ದು, ಟೀಂ ಇಂಡಿಯಾ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಪಂತ್ ಶತಕದಂಚಿನಲ್ಲಿ ಎಡವಿದ್ರು, ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದ್ದಾರೆ.
ನಾಯಕ ರಹಾನೆ ನಿರ್ಗಮನದ ನಂತರ ಬಡ್ತಿ ಪಡೆದು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ್ರು. ಪಂದ್ಯ ಡ್ರಾ ಮಾಡುವುದು ಕಷ್ಟ ಎಂದು ಹೇಳಿದ್ದ ಹಲವು ಪಂಡಿತರ ಬಾಯಿಗೆ ಬೀಗ ಹಾಕಿರುವ ಪಂತ್ ಮತ್ತು ಪೂಜಾರ ಜೋಡಿ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದೆ.
ಈ ಜೋಡಿ 4ನೇ ವಿಕೆಟ್ಗೆ ಭರ್ಜರಿ 148 ರನ್ಗಳ ಕಾಣಿಕೆ ನೀಡಿತು. ಬೌಂಡರಿ ಸಿಕ್ಸರ್ ಗಳಿಂದ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ 97 ರನ್ ಗಳಿಸಿರುವಾಗ ಲಿಯಾನ್ ಎಸೆತದಲ್ಲಿ ಕಮ್ಮಿನ್ಸ್ಗೆ ಕ್ಯಾಚ್ ನೀಡಿ ಶತಕ ವಂಚಿತರಾದರು. ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿದ್ದ ಪೂಜಾರ ದ್ವಿತೀಯ ಇನ್ನಿಂಗ್ಸ್ನಲ್ಲೂ ಅರ್ಧಶತಕ ಸಿಡಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಸದ್ಯ ಪೂಜಾರ ಮತ್ತು ಹನುಮ ವಿಹಾರಿ ಬ್ಯಾಟಿಂಗ್ ನಡೆಸುತ್ತಿದ್ದು, ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿಬೇಕಾದರೆ ಈ ಜೋಡಿ ಹಲವು ಓವರ್ಗಳ ಕಾಲ ಬ್ಯಾಟಿಂಗ್ ನಡೆಸುವ ಅಶ್ಯಕತೆ ಇದೆ.