ಕರ್ನಾಟಕ

karnataka

ETV Bharat / sports

ಕಾಂಗರೂಗಳ ಚುರುಕಿನ ದಾಳಿಗೆ ಟೀಂ ಇಂಡಿಯಾ ಆಲ್​ಔಟ್ :131 ರನ್​ ಮುನ್ನಡೆ ಪಡೆದ ಭಾರತ - ಭಾರತ vs ಆಸ್ಟ್ರೇಲಿಯಾ ಲೈವ್ ಸ್ಕೋರ್

ಆಸೀಸ್ ಬೌಲರ್​ಗಳ ದಾಳಿಯನ್ನು ಎದುರಿಸಲಾಗದೆ ಟೀಂ ಇಂಡಿಯಾ ಬಾಲಂಗೋಚಿಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ್ರು. ಅಶ್ವಿನ್ 14ರನ್​ ಗಳಿಸಿ ಔಟ್ ಆದ್ರೆ, ಉಮೇಶ್ ಯಾದವ್ 9 ಮತ್ತು ಬುಮ್ರಾ ಶೂನ್ಯಕ್ಕೆ ನಿರ್ಗಮಿಸಿದ್ರು..

Australia vs India 2nd Test
ಪೆವಿಲಿಯನ್ ಸೇರಿದ ರಹಾನೆ - ಜಡೇಜಾ

By

Published : Dec 28, 2020, 6:38 AM IST

Updated : Dec 28, 2020, 7:23 AM IST

ಮೆಲ್ಬೋರ್ನ್ :ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 326 ರನ್​ಗಳಿಗೆ ಸರ್ವಪತನ ಕಂಡಿದ್ದು, 131 ರನ್ ಮುನ್ನಡೆ ಪಡೆದಿದೆ.

ಎರಡನೇ ದಿನದ ಅಂತ್ಯಕ್ಕೆ 104 ರನ್​ ಗಳಿಸಿದ್ದ ರಹಾನೆ ಮತ್ತು ಜಡೇಜಾ 40 ರನ್ ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಆರಂಭದಿಂದಲೂ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಹಾನೆ ರನ್​ಔಟ್​ಗೆ ಬಲಿಯಾಗಿದ್ದಾರೆ. ಇತ್ತ ಆಸೀಸ್ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಜಡೇಜಾ ಟೆಸ್ಟ್ ಕ್ರಿಕೆಟ್​ನಲ್ಲಿ 15ನೇ ಅರ್ಧಶತಕ ಸಿಡಿಸಿ ಸ್ಟಾರ್ಕ್​ಗೆ ವಿಕೆಟ್ ಒಪ್ಪಿಸಿದ್ರು.

ಆಸೀಸ್ ಬೌಲರ್​ಗಳ ದಾಳಿಯನ್ನು ಎದುರಿಸಲಾಗದೆ ಟೀಂ ಇಂಡಿಯಾ ಬಾಲಂಗೋಚಿಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ್ರು. ಅಶ್ವಿನ್ 14ರನ್​ ಗಳಿಸಿ ಔಟ್ ಆದ್ರೆ, ಉಮೇಶ್ ಯಾದವ್ 9 ಮತ್ತು ಬುಮ್ರಾ ಶೂನ್ಯಕ್ಕೆ ನಿರ್ಗಮಿಸಿದ್ರು.

ಅಂತಿಮವಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 10 ವಿಕೆಟ್ ನಷ್ಟಕ್ಕೆ 326 ರನ್​ಗಳಿಸಿದ್ದು, 131 ರನ್ ಮುನ್ನಡೆ ಪಡೆದಿದೆ. ಆಸ್ಟ್ರೇಲಿಯಾ ಪರ ಸ್ಟಾರ್ಕ್ ಮತ್ತು ನಾಥನ್ ಲಿಯಾನ್ ತಲಾ 3 ವಿಕೆಟ್ ಪಡೆದ್ರೆ, ಕಮ್ಮಿನ್ಸ್ 2 ಮತ್ತು ಹೆಜಲ್​ವುಡ್ ಒಂದು ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ 195 ರನ್​ಗಳಿಸಿದೆ.

Last Updated : Dec 28, 2020, 7:23 AM IST

ABOUT THE AUTHOR

...view details