ಬೆಲ್ಫಾಸ್ಟ್: ಇಂಗ್ಲೆಂಡ್ ಮಹಿಳೆಯರ ವಿರುದ್ಧ ನಡೆದ ಏಕದಿನ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ 194 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಇಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ 269 ರನ್ ಗಳಿಸಿತ್ತು. ಆರಂಭಿಕರಾದ ಆಲಿಸಾ ಹೆಲಿ 68 ರನ್, ಮೆಗ್ ಲ್ಯಾನ್ನಿಂಗ್ 69 ರನ್, ಗಾರ್ಡ್ನರ್ 29 ಹಾಗೂ ಜೊನಾಸನ್ 24 ರನ್ ಗಳಿಸಿದ್ದರು.
270 ರನ್ಗಳ ಬೃಹತ್ ಟಾರ್ಗೆಟ್ ಬೆನ್ನೆತ್ತಿದ ಇಂಗ್ಲೆಂಡ್ ಮಹಿಳೆಯರು ಎಲಿಸೆ ಪೆರ್ರಿ ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ 77 ರನ್ಗಳಿಗೆ ಆಲೌಟ್ ಆಗಬೇಕಾಯಿತು. ಈ ಮೂಲಕ 194 ರನ್ಗಳ ಹೀನಾಯ ಸೋಲನುಭವಿಸಿತು. ಲೌರಾ ಮಾರ್ಶ್ 21 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಎನಿಸಿದರು.
ಮಾರಕ ಬೌಲಿಂಗ್ ದಾಳಿ ನಡೆಸಿದ ಪೆರ್ರಿ 10 ಓವರ್ಗಳಲ್ಲಿ 4 ಮೇಡನ್ ಸಹಿತ 7 ವಿಕೆಟ್ ಪಡೆದು ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೆಗನ್ ಸ್ಕಟ್ 2 ಹಾಗೂ ಜೊನಾಸನ್ 1 ವಿಕೆಟ್ ಪಡೆದರು.
22 ರನ್ ನೀಡಿ 7 ವಿಕೆಟ್ ಪಡೆದ ಪೆರ್ರಿ ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್ನಲ್ಲಿ ಕಡಿಮೆ ರನ್ ನೀಡಿ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದರು.