ಕ್ಯಾನ್ಬೆರಾ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಪಂದ್ಯ ನಡೆಯುವ ಸಮಯದಲ್ಲಿ ಕ್ರಿಕೆಟ್ ಆಟಗಾರರಿಗೆ ನೀರು ಮತ್ತು ತಂಪು ಪಾನೀಯ ಕೊಂಡೊಯ್ಯುವ ಮೂಲಕ ವಾಟರ್ ಬಾಯ್ ಆಗಿ ಎಲ್ಲರ ಗಮನ ಸೆಳೆದಿದ್ದಾರೆ.
ಕ್ರಿಕೆಟ್ ಪಂದ್ಯದ ವೇಳೆ ವಾಟರ್ ಬಾಯ್ ಆದ ಆಸ್ಟ್ರೇಲಿಯಾ ಪ್ರಧಾನಿ... ನೆಟ್ಟಿಗರಿಂದ ಮೆಚ್ಚುಗೆ!
ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಕ್ರಿಕೆಟ್ ಪಂದ್ಯದ ವೇಳೆ ವಾಟರ್ ಬಾಯ್ ರೀತಿ ಕೆಲಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಪ್ರಧಾನಮಂತ್ರಿ ಇಲೆವೆನ್ ತಂಡದ ವಿರುದ್ಧದ ಟಿ-20 ಪಂದ್ಯ ನಡೆಯುವಾಗ ಬ್ರೇಕ್ ಸಮಯದಲ್ಲಿ ಆಟಗಾರರಿಗೆ ಕುಡಿಯಲು ನೀರು ಮತ್ತು ತಂಪು ಪಾನೀಯ ತೆಗೆದುಕೊಂಡು ಹೋಗಿ ಎಲ್ಲರ ಗಮನ ಸೆಳೆದಿದ್ದಾರೆ. ಸ್ಕಾಟ್ ಮಾರಿಸನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರಾರಾಗಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತು. ಅಲ್ಪ ಮೊತ್ತವನ್ನ ಬೆನ್ನಟ್ಟಿದ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಇಲೆವೆನ್ ತಂಡ 19.5 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 132 ರನ್ ಗಳಿಸುವ ಮೂಲಕ 1 ವಿಕೆಟ್ನಿಂದ ರೋಚಕ ಗೆಲುವು ದಾಖಲಿಸಿದೆ.