ಕರ್ನಾಟಕ

karnataka

ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಆಸ್ಟ್ರೇಲಿಯಾ ವೇಗದ ಬೌಲರ್​ - ಆಸ್ಟ್ರೇಲಿಯಾ ವೇಗಿ ಪೀಟರ್​ ಸಿಡ್ಲ್ ವಿದಾಯ

ನ್ಯೂಜಿಲ್ಯಾಂಡ್​ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ಆಸೀಸ್​ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಪೀಟರ್​ ಸಿಡ್ಲ್​ ತಂಡದ ಆಟಗಾರರೆದುರು ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದರು. ಈ ಸಮಯದಲ್ಲಿ ಭಾವುಕರಾಗಿದ್ದ ಅವರನ್ನು ಸಹ ಆಟಗಾರರು ತಬ್ಬಿಕೊಂಡು ಸಮಾಧಾನಪಡಿಸಿದರು.

Australia pacer Peter Siddle
Australia pacer Peter Siddle

By

Published : Dec 29, 2019, 1:34 PM IST

ಮೆಲ್ಬೋರ್ನ್​:ಆಸ್ಟ್ರೇಲಿಯಾದ ವೇಗದ ಬೌಲರ್​ ಪೀಟರ್​ ಸಿಡ್ಲ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ನಿವೃತ್ತಿ ಘೋಷಿಸಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ಆಸೀಸ್​ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಪೀಟರ್​ ಸಿಡ್ಲ್​ ತಂಡದ ಆಟಗಾರರೆದುರು ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದರು. ಈ ಸಮಯದಲ್ಲಿ ಭಾವುಕರಾಗಿದ್ದ ಅವರನ್ನು ಸಹ ಆಟಗಾರರು ಅಪ್ಪಿಕೊಂಡು ಸಮಾಧಾನಪಡಿಸಿದರು.

ಆಸ್ಟ್ರೇಲಿಯಾ ಪರ ಟೆಸ್ಟ್​ ಕ್ರಿಕೆಟ್​ ತಂಡದ ಪ್ರಭಾವಿ ವೇಗದ ಬೌಲರ್​ ಆಗಿದ್ದ ಸಿಡ್ಲ್​ 2008ರಲ್ಲಿ ಭಾರತದ ವಿರುದ್ಧ ಟೆಸ್ಟ್​ ಕ್ರಿಕೆಟ್​ ಪಾದಾರ್ಪಣೆ ಮಾಡಿದ್ದರು. ತಮ್ಮ ಮೊದಲ​ ಪಂದ್ಯದಲ್ಲೇ ಸಚಿನ್​ ತೆಂಡೂಲ್ಕರ್​ ವಿಕೆಟ್​ ಪಡೆಯುವ ಮೂಲಕ ಖಾತೆ ತೆರೆದಿದ್ದರು.

ಪೀಟರ್ ಸಿಡ್ಲ್​

67 ಟೆಸ್ಟ್​ ಪಂದ್ಯಗಳಿಂದ 221 ವಿಕೆಟ್​ ಪಡೆದಿರುವ ಸಿಡ್ಲ್​ ಆಸೀಸ್​ 13ನೇ ಗರಿಷ್ಠ ವಿಕೆಟ್​ ಪಡೆದ ಬೌಲರ್​ ಆಗಿದ್ದಾರೆ. 2011ರ ಆ್ಯಶಸ್​ ಟೆಸ್ಟ್​ನಲ್ಲಿ ತಮ್ಮ ಜನ್ಮದಿನದಂದೇ ಹ್ಯಾಟ್ರಿಕ್​ ವಿಕೆಟ್​ ಪಡೆದಿರುವುದು ಅವರ ವೃತ್ತಿ ಜೀವನದ ಸ್ಮರಣೀಯ ಕ್ಷಣವಾಗಿತ್ತು.

ಪೀಟರ್​ ಸಿಡ್ಲ್​ 22 ಏಕದಿನ ಪಂದ್ಯ ಹಾಗೂ 2 ಟಿ20 ಪಂದ್ಯಗಳಲ್ಲೂ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದರು.

ABOUT THE AUTHOR

...view details