ಮುಂಬೈ:ಭಾರತ ತಂಡ ಮೂರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಅಗ್ರ ಸ್ಥಾನವನ್ನು ಆಸ್ಟ್ರೇಲಿಯಾ ತಂಡಕ್ಕೆ ಬಿಟ್ಟುಕೊಟ್ಟಿದೆ. ಈ ಮೂಲಕ ಆಸ್ಟ್ರೇಲಿಯಾ ಬ್ಯಾಟಿಂಗ್-ಬೌಲಿಂಗ್ ಜೊತೆಗೆ ಟೀಮ್ ಶ್ರೇಯಾಂಕದಲ್ಲೂ ಮೊದಲ ಸ್ಥಾನ ಪಡೆದುಕೊಂಡಿದೆ.
ಶುಕ್ರವಾರ ಬಿಡುಗಡೆಯಾಗಿದ್ದ ಐಸಿಸಿ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ(116) ಮೊದಲ ಸ್ಥಾನದಲ್ಲಿದ್ದರೆ, ಭಾರತ 3ನೇ ಸ್ಥಾನಕ್ಕೆ ಕುಸಿದಿದೆ. ನ್ಯೂಜಿಲ್ಯಾಂಡ್(115)ಮೂರನೇ ಸ್ಥಾನದಲ್ಲಿದೆ.
ಇನ್ನು ಬ್ಯಾಟ್ಸ್ಮನ್ ವಿಭಾಗದಲ್ಲಿ ಸ್ವಿವ್ ಸ್ಮಿತ್(911) ಮೊದಲ ಸ್ಥಾನ ಪಡೆದಿದ್ದರೆ, ವಿರಾಟ್ ಕೊಹ್ಲಿ (886) 2ನೇ ಶ್ರೇಯಾಂಕ ಹಾಗೂ ಮಾರ್ನಸ್ ಲಾಬುಶೇನ್ (827) ಮೂರನೇ ಸ್ಥಾನದಲ್ಲಿದ್ದಾರೆ.