ಕರ್ನಾಟಕ

karnataka

ETV Bharat / sports

ವಿಶ್ವಕಪ್​ನಲ್ಲಿ ಮಿಂಚಿದ ಆಟಗಾರನನ್ನು ಆ್ಯಶಸ್​ ತಂಡದಿಂದ ಕೈಬಿಟ್ಟ ಕ್ರಿಕೆಟ್​ ಆಸ್ಟ್ರೇಲಿಯಾ! - ಇಂಗ್ಲೆಂಡ್​-ಆಸ್ಟ್ರೇಲಿಯಾ

ವಿಶ್ವಕಪ್​ನಲ್ಲಿ ವಿಕೆಟ್​ ಕೀಪಿಂಗ್​ ಹಾಗೂ ಬ್ಯಾಟಿಂಗ್​ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ಅಲೆಕ್ಸ್​ ಕ್ಯಾರಿಯನ್ನು ಆ್ಯಶಸ್​ ಟೆಸ್ಟ್​ ಸರಣಿಗೆ ಆಸ್ಟ್ರೇಲಿಯಾ ಆಯ್ಕೆ ಸಮಿತಿ ಪರಿಗಣಸದೇ ಇರುವುದಕ್ಕೆ ಮಾಜಿ ನಾಯಕ ಸ್ವಿವ್​ ವಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

http://10.10.50.85//karnataka/27-July-2019/d_kj2olvaaagqwm_2707newsroom_1564219943_1067.jpg

By

Published : Jul 27, 2019, 3:28 PM IST

Updated : Jul 27, 2019, 3:46 PM IST

ಸಿಡ್ನಿ:ವಿಶ್ವಕಪ್​ನಲ್ಲಿ ವಿಕೆಟ್​ ಕೀಪಿಂಗ್​ ಹಾಗೂ ಬ್ಯಾಟಿಂಗ್​ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ಅಲೆಕ್ಸ್​ ಕ್ಯಾರಿಯನ್ನು ಕ್ರಿಕೆಟ್​ ಆಗಸ್ಟ್​ 1ರಿಂದ ಆರಂಭವಾಗಲಿರುವ ಆ್ಯಶಸ್​ ಟೆಸ್ಟ್​ ಸರಣಿಗೆ ಆಸ್ಟ್ರೇಲಿಯಾ ಆಯ್ಕೆ ಸಮಿತಿ ಪರಿಗಣಸದೇ ಇರುವುದನ್ನು ಹಲವಾರು ಮಾಜಿ ಕ್ರಿಕೆಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಶನಿವಾರ ಪ್ರಕಟಗೊಂಡ ಆಸೀಸ್​ ತಂಡದಲ್ಲಿ ಬಾಲ್​ ಟ್ಯಾಂಪರಿಂಗ್​ ಪ್ರಕರಣದಿಂದ ಒಂದು ವರ್ಷ ನಿಷೇಧದಿಂದ ಹೊರಬಂದಿರುವ ವಾರ್ನರ್​, ಸ್ಮಿತ್​ ಹಾಗೂ ಬ್ಯಾನ್​ಕ್ರಾಫ್ಟ್​ ಜೊತೆಗೆ ಮ್ಯಾಥ್ಯೂ ವೇಡ್ ಅವರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಆದರೆ, ಉತ್ತಮ ಪ್ರದರ್ಶನದ ಹೊರತಾಗಿಯೂ ಅಲೆಕ್ಸ್​ ಕ್ಯಾರಿ,​ ಜೋ ಬರ್ನ್ಸ್​, ಕರ್ಟಿಸ್​ ಪ್ಯಾಟರ್​ಸನ್​ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಮಾಜಿ ನಾಯಕ ಸ್ಟಿವ್​ ವಾ ಹಾಗೂ ಮಾಜಿ ಬೌಲರ್​ ಶೇನ್​ ವಾರ್ನ್​ ಬೇಸರ ವ್ಯಕ್ತಪಡಿಸಿದ್ದಾರೆ.

ಅಲೆಕ್ಸ್​ ಕ್ಯಾರಿ

ಅಲೆಕ್ಸ್​ ಕ್ಯಾರಿ ಆ್ಯಶಸ್​ ಸರಣಿಗೆ ಆಯ್ಕೆಯಾಗದಿರುವುದು ನನಗೆ ಬಹುದೊಡ್ಡ ಆಘಾತ ತಂದಿದೆ. ವಿಶ್ವಕಪ್​ನಲ್ಲಿ ಕ್ಯಾರಿ ಬ್ಯಾಟಿಂಗ್​ ಹಾಗೂ ಕೀಪಿಂಗ್​ನಲ್ಲಿ ಮಿಂಚಿದ ಎರಡನೇ ಬೆಸ್ಟ್​ ಕೀಪರ್​ ಆಗಿಯೂ ಅವರನ್ನು ಆಯ್ಕೆ ಮಾಡದಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ ಎಂದು ಸ್ಟಿವ್​ ವಾ ಟ್ವೀಟ್​ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಪಿನ್​ ದಿಗ್ಗಜ ವಾರ್ನ್​" ಆ್ಯಶಸ್​ಗೆ ಕ್ಯಾರಿಯನ್ನು ಆಯ್ಕೆ ಮಾಡದಿರುವುದು ಆಶ್ಚರ್ಯ ಹಾಗೂ ನೋವುಂಟು ಮಾಡಿದೆ ಎಂದು ತಮ್ಮ ಇನ್​​ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.

ಇನ್ನು ಕಳೆದ ಶ್ರೀಲಂಕಾ ಸರಣಿಯ ವೇಳೆ ಶತಕ ಸಿಡಿಸಿದ್ದ ಜೋ ಬರ್ನ್ಸ್​ ಹಾಗೂ ಕರ್ಟಿಸ್​ ಪ್ಯಾಟರ್​ಸನ್​ರನ್ನು ಆಯ್ಕೆ ಮಾಡದಿರುವುದಕ್ಕೆ ಕಾರಣವಿದ್ದರೂ, ಅವರ ಬಳಿ ನೀವು ಕ್ಷಮೆ ಕೇಳಬೇಕು ಎಂದು ಆಸೀಸ್​ ಮಾಜಿ ನಾಯಕ ಟೇಲರ್​ ತಿಳಿಸಿದ್ದಾರೆ.

Last Updated : Jul 27, 2019, 3:46 PM IST

ABOUT THE AUTHOR

...view details