ಕರ್ನಾಟಕ

karnataka

ETV Bharat / sports

ದ.ಆಫ್ರಿಕಾದಲ್ಲಿ ಉಲ್ಬಣಗೊಂಡ ಕೊರೊನಾ.. ಕ್ರಿಕೆಟ್ ಟೂರ್ ರದ್ದುಗೊಳಿಸಿದ ಆಸ್ಟ್ರೇಲಿಯಾ!

ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಾಗಿದ್ದ ಆಸ್ಟ್ರೇಲಿಯಾ ತಂಡ ಇದೀಗ ತನ್ನ ಪ್ರವಾಸ ರದ್ದುಗೊಳಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​ನಲ್ಲಿ ಮಾಹಿತಿ ನೀಡಿದೆ.

Australia team
Australia team

By

Published : Feb 2, 2021, 4:24 PM IST

Updated : Feb 2, 2021, 4:36 PM IST

ಜೋಹಾನ್ಸ್​ಬರ್ಗ್​:ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪದ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ ತಂಡ ಅಲ್ಲಿನ ಪ್ರವಾಸ ರದ್ದುಗೊಳಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಹಾಕಿದೆ.

ಮೂರು ಟೆಸ್ಟ್​ ಪಂದ್ಯಗಳನ್ನಾಡಲು ಆಸ್ಟ್ರೇಲಿಯಾ ತಂಡ ಇದೇ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಾಗಿತ್ತು. ಅದಕ್ಕಾಗಿ ಕಳೆದ ವಾರ ತಂಡ ಕೂಡ ಪ್ರಕಟಿಸಿತ್ತು. ಆದರೆ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರ ಕೈಗೊಂಡಿದೆ.

ಓದಿ: ಇದು ಎಚ್ಚರಿಕೆ ಘಂಟೆ, ನಿರ್ಲಕ್ಷ್ಯ ಮಾಡಲ್ಲ: ಆಸ್ಟ್ರೇಲಿಯಾ ಕ್ರಿಕೆಟ್ ಕೋಚ್​

ದಕ್ಷಿಣ ಆಫ್ರಿಕಾದಲ್ಲಿ 1.5 ಮಿಲಿಯನ್ ಕೊರೊನಾ ಸೋಂಕಿತ ಪ್ರಕರಣಗಳಿದ್ದು, 44 ಸಾವಿರ ಜನರು ಸಾವನ್ನಪ್ಪಿದ್ದಾರೆ. ಜತೆಗೆ ನಿತ್ಯ ಹೆಚ್ಚಿನ ಸೋಂಕಿತ ಪ್ರಕರಣ ಅಲ್ಲಿ ಕಾಣ ಸಿಗುತ್ತಿದ್ದು, ಇದೇ ಕಾರಣಕ್ಕಾಗಿ ಪ್ರವಾಸ ರದ್ಧುಗೊಳಿಸಲಾಗಿದೆ. ಕ್ರಿಕೆಟರ್ಸ್ ಸುರಕ್ಷತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ತಂಡದ ಸಹಾಯಕ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

Last Updated : Feb 2, 2021, 4:36 PM IST

ABOUT THE AUTHOR

...view details