ಕರ್ನಾಟಕ

karnataka

ETV Bharat / sports

ಗತವೈಭವಕ್ಕೆ ಮರಳಿದ ವಿಶ್ವಚಾಂಪಿಯನ್ನರು.... ಪಾಕ್​ ವಿರುದ್ಧ ಸರಣಿ ಜಯ - ಸರಣಿ ಜಯ

ಭಾರತ ನೆಲದಲ್ಲೇ ಕೊಹ್ಲಿ ಪಡೆಗೆ ಶಾಕ್​ ನೀಡಿ ಟಿ -20 ಹಾಗೂ ಏಕದಿನ ಸರಣಿ ಜಯಸಿದ್ದ ಆಸ್ಟ್ರೇಲಿಯಾ ತನ್ನ ಗೆಲುವಿನ ಓಟವನ್ನು ಮುಂದುವರಿಸಿದ್ದು ಪಾಕಿಸ್ತಾನದ ವಿರುದ್ಧ ಏಕದಿನ ಸರಣಿ ವಶಪಡಿಸಿಕೊಂಡಿದೆ.

ವಿಶ್ವಚಾಂಪಿಯನ್​​

By

Published : Mar 28, 2019, 4:56 PM IST

ಅಬುಧಾಬಿ: 5 ಬಾರಿಯ ವಿಶ್ವಚಾಂಪಿಯನ್​ ಆಸ್ಟ್ರೇಲಿಯಾ ತನ್ನ ಗತವೈಭವದ ಹಳಿಗೆ ಮರಳಿದೆ. ಪಾಕಿಸ್ತಾನದ ತಂಡದ ವಿರುದ್ಧವೂ ಸರಣಿ ಇನ್ನು 2 ಪಂದ್ಯಗಳಿರುವಂತೆ ಸರಣಿ ವಶಪಡಿಸಿಕೊಂಡಿದೆ.

ಬುಧವಾರ ಅಬುಧಾಬಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಫಿಂಚ್​ ಪಡೆ 80 ರನ್​ಗಳ ಭರ್ಜರಿ ಜಯಸಾಧಿಸಿತು.

ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಆಸಿಸ್​ ತಂಡಕ್ಕೆ ನಾಯಕ ಆ್ಯರೋನ್​ ಫಿಂಚ್​ 90, ಪೀಟರ್​ ಹ್ಯಾಂಡ್ಸ್​ಕಾಂಬ್​ 47, ಗ್ಲೇನ್​ ಮ್ಯಾಕ್ಸ್​ವೆಲ್​ 71ರನ್​​ ಗಳಿಸಿ 266 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಪಾಕಿಸ್ತಾನದ ಪರ ಉಸ್ಮಾನ್​ ಶೇನ್ವಾರಿ, ಜುನೈದ್​ಖಾನ್​, ಯಾಸಿರ್​ ಶಾ, ಇಮಾದ್​ ವಾಸಿಂ, ಹ್ಯಾರಿಸ್​ ಸೊಹೈಲ್​ ತಲಾ ಒಂದು ವಿಕೆಟ್​ ಪಡೆದರು.

267 ರನ್​ಗಳ ಗುರಿ ಪಡೆದ ಪಾಕಿಸ್ತಾನ ಆಸೀಸ್​ ಬೌಲಿಂಗ್​ ದಾಳಿಗೆ ಸಿಲುಕಿ 44.4 ಓವರ್​ಗಳಲ್ಲಿ 186 ರನ್​ಗಳಿಗೆ ಆಲೌಟ್​ ಆಗುವ ಮೂಲಕ 80 ರನ್​ಗಳ ಸೋಲನುಭವಿಸಿತು. ಮಲಿಕ್​ 32, ಉಮರ್ ಅಕ್ಮಲ್​ 36, ಇಮಾದ್​ ವಾಸಿಂ 43 ರನ್​ಗಳಿಸಿ ಕೊಂಚ ಪ್ರತಿರೋಧ ತೋರಿದರೂ ಗೆಲುವು ಸಾಧಿಸಲಾಗಲಿಲ್ಲ.

ಪ್ಯಾಟ್​ ಕಮಿನ್ಸ್​ 3, ಆ್ಯಂಡಂ ಜಂಪಾ 4 ,ಮ್ಯಾಕ್ಸ್​ವೆಲ್​, ಬೆಹ್ರೆನ್​ಡ್ರಾಫ್​, ಲಿಯಾನ್​ ತಲಾ ಒಂದು ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ABOUT THE AUTHOR

...view details