ಪರ್ತ್: ಕಿವೀಸ್ ವಿರುದ್ಧ ಆಸ್ಟ್ರೇಲಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ 296 ರನ್ಗಳ ಬೃಹತ್ ಜಯ ಸಾಧಿಸಿ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.
ಪರ್ತ್ನಲ್ಲಿ ನಡೆದ 3 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಹಾಗೂ ನಥನ್ ಲಿಯಾನ್ ಅವರ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ಕಿವೀಸ್ ವಿರುದ್ಧ ಎರಡೂ ಇನ್ನಿಂಗ್ಸ್ನಲ್ಲೂ ಪ್ರಾಬಲ್ಯ ಸಾಧಿಸಿದ ಆಸೀಸ್ ಇನ್ನು ಒಂದು ದಿನ ಆಟ ಬಾಕಿ ಉಳಿದಿರುವಂತೆ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ಮಾರ್ನಸ್ ಲಾಬುಶೇನ್(143) ಅವರ ಶತಕದ ನೆರವಿನಂದ 416 ರನ್ ಗಳಿಸಿತ್ತು. ಈ ಮೊತ್ತವನ್ನು ಹಿಂಬಾಲಿಸಿದ ನ್ಯೂಜಿಲ್ಯಾಂಡ್ ಮಿಚೆಲ್ ಸ್ಟಾರ್ಕ್(52ಕ್ಕೆ 5) ದಾಳಿಗೆ ಸಿಲುಕಿ 166 ರನ್ಗಳಿಗೆ ಆಲೌಟ್ ಆಯಿತು. ರಾಸ್ ಟೇಲರ್ 80 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದ್ದರು.