ನವದೆಹಲಿ: ಬ್ಯಾಟಿಂಗ್ ಸ್ಟಾರ್ ಆಗಿ ಮೈದಾನದಲ್ಲಿದ್ದ ಮೆರೆದಾಡುತ್ತಿದ್ದ ಡೇವಿಡ್ ವಾರ್ನರ್ ಇದೀಗ ಹೋಮ್ ಕ್ವಾರಂಟೈನ್ನಲ್ಲಿದ್ದು, ಟಿಕ್ ಟಾಕ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಕೊರೊನಾದಿಂದ ಕ್ರಿಕೆಟ್ ಜಗತ್ತು ಸ್ತಗಿತಗೊಂಡಿದೆ. ಆಟಗಾರರು ತಮ್ಮ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದರೆ, ಇನ್ನು ಕೆಲವರು ಸಾಮಾಜಿಕ ಜಾಲಾತಾಣದಲ್ಲಿ ಇತರೆ ಆಟಗಾರರೊಂದಿಗೆ ಆನ್ಲೈನ್ ಸಂವಾದ ನಡೆಸುತ್ತಿದ್ದಾರೆ.
ಆದರೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮಾತ್ರ ಬಿಡುವಿನ ಸಮಯವನ್ನು ಸಖತ್ತಾಗಿ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ಟಿಕ್ಟಾಕ್ ಖಾತೆ ತೆರೆದಿದ್ದ ಅವರು, ತೆಲುಗು ಹೀರೋಗಳ ಡೈಲಾಗ್, ಸಾಂಗ್ಗೆ ಡಬ್ಬಿಂಗ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಮೊದಲಿಗೆ ಅಲಾ ವೈಕುಂಠಪುರಂ ಲೋ ಚಿತ್ರದ ‘ಬುಟ್ಟ ಬೊಮ್ಮ’ ಗೀತೆಗೆ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ನೃತ್ಯ ಮಾಡಿದ್ದರು. ನಂತರ ಮಹೇಶ್ ಬಾಬು ಅವರ ಸಿಗ್ನೇಚರ್ ಡೈಲಾಗ್ ಆಗಿರುವ ‘ಒಕ್ಕ ಸಾರಿ ಕಮಿಟ್ ಆಯ್ತೆ, ನಾ ಮಾತ ನೆನೆ ವಿನ್ನನು’ಹೇಳುವ ಮೂಲಕ ತೆಲುಗು ಅಭಿಮಾನಿಗಳ ಮನಗೆದ್ದಿದ್ದರು.
ಇದೀಗ ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಸಿದ್ದಿಯಾಗಿರುವ ತೆಲುಗು ಸಿನಿಮಾ ಬಾಹುಬಲಿ ಚಿತ್ರದ ಡೈಲಾಗ್ಗೆ ಟಿಕ್ಟಾಕ್ ಮಾಡಿ ಮಿಂಚಿದ್ದಾರೆ. ವಿಶೇಷವೆಂದರೆ ಅವರು ಈ ಬಾರಿ ಬಾಹುಬಲಿಯಂತೆಯೇ ವೇಷ ಧರಿಸಿದ್ದು, ‘ಅಮರೇಂದ್ರ ಬಾಹುಬಲಿ ಅನು ನೇನು’ ಡೈಲಾಗ್ಗೆ ಟಬ್ಬಿಂಗ್ ಮಾಡಿದ್ದಾರೆ. ಇವರಿಗೆ ಇವರ ಮಗಳು ಕೂಡ ಸಾಥ್ ನೀಡಿದ್ದಾರೆ. ಈ ವಿಡಿಯೋದಲ್ಲಿ ಈ ಚಿತ್ರ ಯಾವುದು ಎಂದು ಗೆಸ್ ಮಾಡಿ ಎಂದು ಸನ್ರೈಸರ್ಸ್ ಹೈದರಾಬಾದ್ ಟ್ಯಾಗ್ ಮಾಡಿದ್ದಾರೆ.