ಸಿಡ್ನಿ: ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಎಲಿಸ್ ಪೆರ್ರಿ ಮತ್ತು ಆಸ್ಟ್ರೇಲಿಯಾ ರಗ್ಬಿ ಯೂನಿಯನ್ ಆಟಗಾರ ಮ್ಯಾಟ್ ಟುಮುವಾ ತಮ್ಮ ದಾಂಪತ್ಯ ಜೀವನದಿಂದ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಕಳೆದ 4 ವರ್ಷಗಳ ಹಿಂದೆ ವಿವಾಹವಾಗಿ ಈ ಜೋಡಿ ಇದೀಗ ಇಬ್ಬರ ಸಮ್ಮತಿಯೊಂದಿಗೆ ಬೇರೆಯಾಗಲು ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಪರಸ್ಪರ ಗೌರವದಿಂದ ನಾವು ಬೇರೆಯಾಗಲು ಈ ವರ್ಷದ ಆರಂಭದಲ್ಲೇ ನಿರ್ಧರಿಸಿದ್ದೆವು ಎಂದು ಪೆರ್ರಿ - ಟುಮುವಾ ಜೋಡಿ ಜಂಟಿಯಾಗಿ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪೆರ್ರಿ ಮತ್ತು ಟುಮುವಾ 2014 ಆಗಸ್ಟ್ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡು 2015 ಡಿಸೆಂಬರ್ನಲ್ಲಿ ವಿವಾಹವಾಗಿದ್ದರು.
ಕಳೆದ ಒಂದು ದಶಕಗಳಿಂದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಪ್ರಾಬಲ್ಯ ಸಾಧಿಸಿರುವ ಪೆರ್ರಿ 2019ರ ಐಸಿಸಿ ವರ್ಷದ ಕ್ರಿಕೆಟರ್ ಪ್ರಶಸ್ತಿಗೆ ಪಾತ್ರರಾಗಿದ್ದರು.