ಮೆಲ್ಬೋರ್ನ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟಿವ್ ಸ್ಮಿತ್ ನ್ಯೂಜಿಲ್ಯಾಂಡ್ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ 77 ರನ್ ಗಳಿಸುವ ಮೂಲಕ ಆಸೀಸ್ ಪರ ಅತಿ ಹೆಚ್ಚು ರನ್ಗಳಿಸಿರುವ ಟಾಪ್ 10 ಆಟಗಾರರ ಪಟ್ಟಿಗೆ ಸೇರಿದ್ದಾರೆ.
ಸ್ಮಿತ್ ಆಸ್ಟ್ರೇಲಿಯಾದ ದಿಗ್ಗಜ ಗ್ರೇಗ್ ಚಾಪೆಲ್(7,110) ಅವರನ್ನು ಹಿಂದಿಕ್ಕಿ ಆಸ್ಟ್ರೇಲಿಯಾ ಪರ ಹೆಚ್ಚು ಟೆಸ್ಟ್ ರನ್ ಗಳಿಸಿದ 10ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಸ್ಮಿತ್ ಪ್ರಸ್ತುತ ಕ್ರಿಕೆಟ್ನಲ್ಲಿ ಓರ್ವ ಅದ್ಭುತ ಬ್ಯಾಟ್ಸ್ಮನ್. ಅವರು ಮುಂದಿನ ಮೂರು ನಾಲ್ಕು ವರ್ಷಗಳಲ್ಲೂ ಕೂಡ ಇದೇ ಪ್ರದರ್ಶನ ತೋರಲಿದ್ದಾರೆ ಎಂದು ಭಾವಿಸಿದ್ದೇನೆ. ಅವರು ತಮ್ಮ ವೃತ್ತಿ ಜೀವನ ಮುಗಿಸುವುದರೊಳಗೆ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟ್ಸ್ಮನ್ ಆಗಿ ಉಳಿದುಕೊಳ್ಳಲಿದ್ದಾರೆ ಎಂದು ಗ್ರೇಗ್ ಚಾಪೆಲ್ ತಿಳಿಸಿದ್ದಾರೆ.